SHIVAMOGGA LIVE NEWS | 2 ಮಾರ್ಚ್ 2022
ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ ಮುಂದುವರೆದಿದೆ. ಮೈಸೂರಿಗೆ ತೆರಳಲು ಬಸ್ ಹತ್ತಿದ್ದ ಯುವತಿಯೊಬ್ಬರ ಲ್ಯಾಪ್ ಟಾಪ್ ಬ್ಯಾಗ್ ಕಳವು ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಖಾಸಗಿ ಕಂಪನಿ ಉದ್ಯೋಗಿ ಅನುಶ್ರೀ ಎಂಬುವವರು ಮೈಸೂರಿಗೆ ತೆರಳಲು ಬಸ್ ಹತ್ತಿದ್ದರು. ಲಗೇಜ್ ಬ್ಯಾಗ್ ಮತ್ತು ಲ್ಯಾಪ್ ಟಾಪ್ ಬ್ಯಾಗನ್ನು ಸೀಟಿನಲ್ಲಿ ಇರಿಸಿದ್ದರು. ಕಂಡಕ್ಟರ್’ಗೆ ತಿಳಿಸಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಲ್ಯಾಪ್ ಟಾಪ್ ಬ್ಯಾಗ್ ನಾಪ್ತೆಯಾಗಿತ್ತು.
ಲ್ಯಾಪ್ ಟಾಪ್ ಬ್ಯಾಗಿನಲ್ಲಿ ಒಂದು ಲ್ಯಾಪ್ ಟಾಪ್, ಮೌಸ್, 2500 ರೂ. ನಗದು, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಇತರೆ ದಾಖಲೆಗಳಿದ್ದ ಪರ್ಸ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.