ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 APRIL 2023
SHIMOGA : ದಾಖಲೆಗಳನ್ನು ಅಪ್ ಲೋಡ್ ಮಾಡದೆ ಇದ್ದರೆ ಇನ್ನು 24 ಗಂಟೆಯಲ್ಲಿ ನಿಮ್ಮ ಬ್ಯಾಂಕ್ ಖಾತೆ (Bank Account) ಬ್ಲಾಕ್ ಆಗಲಿದೆ. ಹೀಗಂತ ಮೊಬೈಲ್‍ಗೆ ಬಂದಿದ್ದ ಮೆಸೇಜ್ ಕಂಡು ಆತಂಕಗೊಂಡ ವ್ಯಕ್ತಿಯೊಬ್ಬರು ಅದರಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ, 1.81 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹೊಸನಗರ ತಾಲೂಕಿನ ಗ್ರಾಮವೊಂದರ ವ್ಯಕ್ತಿಯು (ಹೆಸರು ಗೌಪ್ಯ) ಕೆನರಾ ಬ್ಯಾಂಕ್‍ನಲ್ಲಿ ಖಾತೆ (Bank Account) ಹೊಂದಿದ್ದಾರೆ. ಆ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‍ಗೆ ನಿಮ್ಮ ಕೆವೈಸಿ ಅಪ್‍ಡೇಟ್ ಮಾಡದಿದ್ದರೆ 24 ಗಂಟೆಯಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ ಎಂದು ಮೆಸೇಜ್ ಬಂದಿತ್ತು. ಅದರಲ್ಲಿರುವ ಮೊಬೈಲ್ ನಂಬರ್‍ಗೆ ಕರೆ ಮಾಡಿದಾಗ, ಬ್ಯಾಂಕ್ ಮ್ಯಾನೇಜರ್ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ.
ಹೊಸನಗರದ ವ್ಯಕ್ತಿಯ ಬ್ಯಾಂಕ್ ಖಾತೆ ವಿವರ, ಕಸ್ಟಮರ್ ಐಡಿ, ಎಟಿಎಂ ಕಾರ್ಡ್ ನಂಬರ್ ಪಡೆದುಕೊಂಡಿದ್ದಾನೆ. ಬಳಿಕ ಒಟಿಪಿ ನಂಬರ್ ಬಂದಿದ್ದು ಅದರ ಮಾಹಿತಿಯನ್ನು ಪಡೆದಿದ್ದಾನೆ. ಸ್ವಲ್ಪ ಸಮಯದ ಬಳಿಕ ಹೊಸನಗರದ ವ್ಯಕ್ತಿಯ ಮೊಬೈಲ್‍ಗೆ ಮೂರು ಬಾರಿ ಹಣ ಕಡಿತವಾದ ಮೆಸೇಜ್ ಬಂದಿದೆ. ಮೊದಲು 98,500 ರೂ., 50 ಸಾವಿರ ರೂ., 32,600 ರೂ., ಹಣ ಕಡಿತವಾಗಿದೆ.
ಇದನ್ನೂ ಓದಿ – ಚಾಕುವಿನಿಂದ ಇರಿದು ಯುವಕನ ಮರ್ಡರ್, ತಡರಾತ್ರಿ ಇಬ್ಬರು ಪೊಲೀಸ್ ವಶಕ್ಕೆ
ಆತಂಕಗೊಂಡ ಹೊಸನಗರದ ವ್ಯಕ್ತಿಯು ಪರಿಚಯದವರಿಗೆ ವಿಚಾರ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.