SHIVAMOGGA LIVE NEWS | 26 MARCH 2023
SHIMOGA : ರೈಲಿನ ಎಸಿ ಬೋಗಿಯ ಶೌಚಾಲಯದಲ್ಲಿ (Train Toilet) ಶಿವಮೊಗ್ಗದ ಬ್ಯಾಂಕ್ ಒಂದರ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬರ ಮೃತದೇಹ ಪತ್ತೆಯಾಗಿದೆ. ಇವತ್ತು ಮಧ್ಯಾಹ್ನ ರೈಲು ಶಿವಮೊಗ್ಗಕ್ಕ ನಿಲ್ದಾಣಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಅಶೋಕ್ ಚೌಧರಿ ಎಂಬುವವರು ಮೃತ ದುರ್ದೈವಿ. ಯುನಿಯನ್ ಬ್ಯಾಂಕಿನ ಶಿವಮೊಗ್ಗದ ಬಿ.ಹೆಚ್.ರಸ್ತೆ ಶಾಖೆಯಲ್ಲಿ ಅಶೋಕ್ ಚೌಧರಿ ಅವರು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕುಟುಂಬ ಕರೆತರಲು ಬೆಂಗಳೂರಿಗೆ
ಅಶೋಕ್ ಚೌಧರಿ ಅವರ ಪತ್ನಿ, ಮಗು ಅಸ್ಸಾಂನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಶಿವಮೊಗ್ಗಕ್ಕೆ ಕರೆತರಲು ಅಶೋಕ್ ಚೌಧರಿ ಅವರು ಬೆಂಗಳೂರಿಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ ಅಶೋಕ್ ಚೌಧರಿ ಅವರು ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ತೆರಳಿದ್ದರು. ಎಸಿ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ ಅಶೋಕ್ ಚೌಧರಿ ಅವರಿಗೆ ಶೌಚಾಲಯಕ್ಕೆ (Train Toilet) ತೆರಳಿದ್ದಾಗ ಹೃದಯಾಘಾತ ಸಂಭವಿಸಿರುವ ಶಂಕೆ ಇದೆ.
ಕ್ಲೀನ್ ಮಾಡಲು ಹೋದಾಗ ಬೆಳಕಿಗೆ
ಯಶವಂತಪುರದಿಂದ ಬೆಳಗ್ಗೆ ಹೊರಟ ರೈಲು ಮಧ್ಯಾಹ್ನ ಶಿವಮೊಗ್ಗ ನಿಲ್ದಾಣಕ್ಕೆ ತಲುಪಿದೆ. ಶಿವಮೊಗ್ಗದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಿಬ್ಬಂದಿ ಬಹು ಹೊತ್ತಿನಿಂದ ಶೌಚಾಲಯದ ಬಾಗಿಲು ಲಾಕ್ ಆಗಿರುವುದನ್ನು ಗಮನಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಶೌಚಾಲಯದ ಬಾಗಿಲು ತೆಗೆದು ನೋಡಿದಾಗ ಅಶೋಕ್ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ – ಅಗಲಿದ ಯೋಧನಿಗೆ ಅಂತಿಮ ನಮನ, ಅಂತ್ಯಕ್ರಿಯೆಗೆ ಸಾವಿರ ಸಾವಿರ ಜನ, ಸೈನಿಕನ ಪರ ಘೋಷಣೆ
ಮೆಗ್ಗಾನ್ ಆಸ್ಪತ್ರೆಗೆ ಮೃತದೇಹ
ರೈಲ್ವೆ ಪೊಲೀಸರು ಆಂಬುಲೆನ್ಸ್ ಮೂಲಕ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ನಿಲ್ದಾಣದ ಎಸಿ ಕೋಚ್ ಬಳಿ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.