ಬ್ಯಾಂಕ್‌ ಮ್ಯಾನೇಜರ್‌ ಮನೆಯ ಇಂಟರ್‌ ಲಾಕ್‌ ಮುರಿದು ಒಳ ನುಗ್ಗಿದ ಕಳ್ಳರು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 15 JUNE 2024

ANANDAPURA : ಮನೆಯಲ್ಲಿ ಯಾರೂ ಇಲ್ಲದಾಗ ಬಾಗಿಲಿನ ಇಂಟರ್ ಲಾಕ್ (interlock) ಮುರಿದು ಬಂಗಾರ ಮತ್ತು ಹಣವನ್ನು ಕಳವು ಮಾಡಿದ ಘಟನೆ ಅಂದಾಸುರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೆನರಾ ಬ್ಯಾಂಕ್ ಮ್ಯಾನೇಜ‌ರ್ ಆಗಿದ್ದ ಅಬ್ದುಲ್ ಅಹಮದ್‌ ಅವರು ಅಂದಾಸುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪದೋನ್ನತಿ ಮೇರೆಗೆ ಅವರಿಗೆ ಮಣಿಪಾಲಕ್ಕೆ ವರ್ಗಾವಣೆಯಾಗಿತ್ತು.

ಶನಿವಾರ ಮಣಿಪಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು, ಮನೆಯನ್ನು ಇನ್ನೂ ಖಾಲಿ ಮಾಡಿರಲಿಲ್ಲ. ಬೀರುವಿನಲ್ಲಿ ಇಟ್ಟಿದ್ದ 330 ಗ್ರಾಂ ಬಂಗಾರ ಮತ್ತು 90 ಸಾವಿರ ರೂ. ಕಳ್ಳತನವಾಗಿದೆ ಎಂದು ಅಬ್ದುಲ್ ಅಹಮದ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ – ಚುನಾವಣೆಗೆ ಸಹಾಯ ಮಾಡಲಿಲ್ಲ ಅಂತಾ ಕೊಲೆ, ಶಿವಮೊಗ್ಗದಲ್ಲಿ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ಏನಿದು ಕೇಸ್‌?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment