ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI, 13 AUGUST 2024 : ಶಾರದಾ ಮಂದಿರ ಎದುರು ನಿಂತಿದ್ದ ವೃದ್ಧನಿಗೆ ಬೆದರಿಸಿ ಚಿನ್ನಾಭರಣ ಹಾಗೂ ಹಣ ಸುಲಿಗೆ ಮಾಡಿದ್ದ ಇಬ್ಬರನ್ನು ಪೊಲೀಸರು ಎರಡೇ ದಿನದಲ್ಲಿ ಬಂಧಿಸಿದ್ದು (ARREST) 1.94 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭದ್ರಾವತಿ ಅನ್ವರ್ ಕಾಲನಿ ಮೊಮಿನ್ ಮೊಹಲ್ಲಾದ ಜಬೀವುಲ್ಲಾ ಅಲಿಯಾಸ್ ಮಲ್ಲಿ (23) ಮತ್ತು ಮಹಮದ್ ಗೌಸ್ ಅಲಿಯಾಸ್ ಗುಂಡಾ(24) ಬಂಧಿತರು. ಕಳೆದ ಶುಕ್ರವಾರ ರಾತ್ರಿ ಭದ್ರಾವತಿ ಟೌನ್‌ನ ಶಾರದಾ ಮಂದಿರ ಬಳಿ ನಿಂತಿದ್ದ ಹುತ್ತಾ ಕಾಲನಿಯ ಮುರಳೀಧರ್ (64) ಎಂಬುವರನ್ನು ನಾಲ್ಕೈದು ಯುವಕರ ಗುಂಪು ಬೆದರಿಸಿ ಉಂಗುರ, ಚಿನ್ನದ ಸರ, ಹಣ ಮತ್ತು ಇತರೆ ವಸ್ತುಗಳನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಮುರುಳೀಧರ್ ಅವರು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ ⇒ ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ನೀರಿನ ಒಳ ಹರಿವು ಇವತ್ತು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್
ಭದ್ರಾವತಿ ನಗರ ಸಿಪಿಐ ಶ್ರೀಶೈಲಕುಮಾರ್ ನೇತೃತ್ವದಲ್ಲಿ ನ್ಯೂಟೌನ್ ಠಾಣೆ ಪಿಎಸ್‌ಐಗಳಾದ ಟಿ.ರಮೇಶ್, ಭಾರತಿ, ಹಳೇನಗರ ಠಾಣೆ ಪಿಎಸ್‌ಐ ಚಂದ್ರಶೇಖರ್ ನಾಯ್ಕ, ಸಿಬ್ಬಂದಿ ಟಿ.ಪಿ.ಮಂಜಪ್ಪ, ನವೀನ್, ಸಂತೋಷ ನಾಯ್ಕ, ಪ್ರಸನ್ನ, ಹಾಲಪ್ಪ, ಮೌನೇಶ ಶಿಕಲ್, ಎಫ್.ಎಸ್. ಚಿಕ್ಕಪ್ಪ, ಪ್ರವೀಣ್ ನೇತೃತ್ವದ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದೆ. ಆರೋಪಿಗಳಿಂದ 1.59 ಲಕ್ಷ ರೂ. ಮೌಲ್ಯದ 24.5 ಗ್ರಾಂ ಬಂಗಾರದ ಸರ ಮತ್ತು ಉಂಗುರ ಹಾಗೂ 35 ಸಾವಿರ ರೂ. ಮೌಲ್ಯದ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ ⇒ ಸಾಲ ವಸೂಲಿಗೆ ಮಹಿಳೆಯರ ಮನೆಗೆ ಹೋಗಿ ಕೂರುವ ಸಿಬ್ಬಂದಿ, ಖಡಕ್ ಸೂಚನೆ ನೀಡುವಂತೆ ಏಕಾಂಗಿ ಹೋರಾಟ