ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರನೊಬ್ಬ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್’ಗೆ ಹ್ಯಾಂಡಲ್ ತಗುಲಿಸಿದ್ದು, ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಸವಳಂಗ ರಸ್ತೆಯ ಬಿಕ್ಕೋನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹೊಳೆಹಟ್ಟಿಯ ಮಂಜುನಾಥ, ಅಭಿಲಾಶ್, ಪವನ್ ಕುಮಾರ್ ಗಾಯಗೊಂಡವರು.
ಹೇಗಾಯ್ತು ಘಟನೆ?
ಜೋಗಿಹಳ್ಳಿ ಜಾತ್ರೆಗೆ ಅಭಿಲಾಶ್, ಮಂಜುನಾಥ್ ಮತ್ತು ಪವನ್ ಕುಮಾರ್ ಒಂದೇ ಬೈಕಿನಲ್ಲಿ ತೆರಳುತ್ತಿದ್ದರು. ಮಂಜುನಾಥ ಬೈಕ್ ಚಲಾಯಿಸುತ್ತಿದ್ದ.
ಬಿಕ್ಕೋನಹಳ್ಳಿ ಬಳಿ ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ, ಎದುರಿನಿಂದ ಬರುತ್ತಿದ್ದ ಬೈಕಿನ ಹ್ಯಾಂಡಲ್’ಗೆ ಈ ಮೂವರು ತೆರಳುತ್ತಿದ್ದ ಬೈಕ್ ತಾಗಿದೆ. ಹಾಗಾಗಿ ಆಯಾತಪ್ಪಿ ಮೂವರೂ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅಭಿಲಾಶ್, ಮಂಜುನಾಥ ಮತ್ತು ಪವನ್ ಕುಮಾರ್ ಅವರಿಗೆ ಗಾಯವಾಗಿದೆ.
ಸ್ಥಳೀಯರ ನೆರವಿನಿಂದ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422