ಬೈಕಿನಿಂದ ಬಿದ್ದು ಹಿಂಬದಿ ಸವಾರ ಸಾವು | ಬಾರ್ ಕ್ಯಾಶಿಯರ್ ತಲೆಗೆ ಬಾಟಲಿ ಹೊಡೆದ ಕುಡುಕರು | ಜಿಲ್ಲೆಯ 5 CRIME NEWS

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

PILLION RIDER

SHIVAMOGGA LIVE NEWS | 4 FEBRUARY 2023

ಬೋರ್ ವೆಲ್ ಲಾರಿ ಡಿಕ್ಕಿ, ಬೈಕ್ ಸವಾರರಿಗೆ ಗಂಭೀರ ಗಾಯ

ಆನವಟ್ಟಿ : ಬೋರ್ ವೆಲ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಸಂತ ಹೂವಿನ ಕೊಪ್ಪಲು ಅವರು ತಮ್ಮ ಸ್ನೇಹಿತನ ಮಗ ಶ್ರೀಶಾಸ್ತನನ್ನು ಬೈಕಿನಲ್ಲಿ ಕೂರಿಸಿಕೊಂಡು ಪುಟ್ಟನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಬಳಿ ತೆರಳುತಿದ್ದರು. ನಿಟ್ಟಕ್ಕಿ ಕಡೆಗೆ ಬಂದ ಬೋರ್ ವೆಲ್ ಲಾರಿಯು ಬೈಕಿಗೆ ಡಿಕ್ಕಿ ಹೊಡೆದಿದೆ. ವಸಂತ ಮತ್ತು ಶ್ರೀಶಾಸ್ತ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – 2 ತಿಂಗಳು ಬಾಳೆಬರೆ ಘಾಟ್ ಬಂದ್, ತೀರ್ಥಹಳ್ಳಿ, ಸಾಗರ, ಹೊಸನಗರದಿಂದ ಕುಂದಾಪುರಕ್ಕೆ 3 ಬದಲಿ ಮಾರ್ಗ

Crime-News-General-Image

ತೋಟಕ್ಕೆ ಹೋದಾಗ ಗುದ್ದಲಿಯಿಂದ ಹಲ್ಲೆ

ಹೊಳೆಹೊನ್ನೂರು : ತೋಟಕ್ಕೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಹಿಂಬದಿಯಿಂದ ಗುದ್ದಲಿಯಿಂದ ಹೊಡೆಯಲಾಗಿದೆ. ಹೊಳೆಹೊನ್ನೂರು ಎನ್.ಟಿ.ಸರ್ಕಲ್ ನಿವಾಸಿ ಬಿ.ಕೆ.ಲಕ್ಷ್ಮೀನಾರಾಯಣ ಎಂಬುವವರು ಗಾಯಗೊಂಡಿದ್ದಾರೆ. ತೋಟದಲ್ಲಿ ಕೆಲಸ ನಡೆಯುತ್ತಿದ್ದು, ಅದನ್ನು ನೋಡಲು ಹೋಗಿದ್ದಾಗ ಘಟನೆ ಸಂಭವಿಸಿದೆ. ಲಕ್ಷ್ಮೀನಾರಾಯಣ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – 2050ರಲ್ಲಿ ಹೇಗಿರಬೇಕು ಶಿವಮೊಗ್ಗ? ನೀವು ಹೇಳಬಹುದು ಅಭಿಪ್ರಾಯ

ಬಸ್ಸಿಗೆ ಕಾಯುತ್ತಿದ್ದವನಿಗೆ ಗುದ್ದಿದ ಬಸ್

ಹೊಳೆಹೊನ್ನೂರು : ಬಸ್ಸಿಗೆ ಕಾಯುತ್ತಿದ್ದ ಯುವಕನಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುವಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತರಗನಹಳ್ಳಿ ಬಾಷಾ ಸಾಬ್ ಅವರ ಪುತ್ರ ನಜೀಮ್ ಗಾಯಗೊಂಡಿದ್ದಾನೆ. ನಜೀಮ್, ಹೊಳೆಹೊನ್ನೂರಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ. ಶಿವಮೊಗ್ಗ ಕಡೆಯಿಂದ ಕಾರು ಮತ್ತು ಅದರ ಹಿಂದೆ ಬಸ್ ಬರುತ್ತಿತ್ತು. ಕಾರಿನ ಚಾಲಕ ದಿಢೀರ್ ಎಡಗಡೆಗೆ ತಿರುಗಿಸಿದ್ದಾನೆ. ಬಸ್ಸಿನ ಚಾಲಕನು ಕೂಡಲೆ ಎಡಕ್ಕೆ ತಿರುಗಿಸಿದ್ದು ನಜೀಮ್ ಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆ ಸಂಬಂಧ ಕಾರು ಮತ್ತು ಬಸ್ಸಿನ ಚಾಲಕರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ದೂರ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗಕ್ಕೆ ಕೋಟಿ ಕೋಟಿ ಮೊತ್ತದ ಸೈನ್ಸ್ ಮ್ಯೂಸಿಯಂ, ನವುಲೆಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್

ಮದ್ಯ ಸೇವಿಸಿ ಬಾರ್ ಕ್ಯಾಶಿಯರ್ ತಲೆಗೆ ಬಾಟಲಿಯಿಂದ ಹೊಡೆದರು

ರಿಪ್ಪನ್ ಪೇಟೆ : ಬಾರ್ ಒಂದರಲ್ಲಿ ಮದ್ಯ ಸೇವಿಸಿದವರಿಗೆ ಬಿಲ್ ಪಾವತಿಸುವಂತೆ ಸೂಚಿಸಿದ ಕ್ಯಾಶಿಯರ್ ಗೆ ಅವಾಚ್ಯವಾಗಿ ನಿಂದಿಸಿ, ಬಾಟಲಿಯಿಂದ ತಲೆಗೆ ಹೊಡೆಯಲಾಗಿದೆ. ಮೂಲಗಿರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಘಟನೆ ಸಂಭವಿಸಿದೆ. ಬಾರ್ ಗೆ ಬಂದಿದ್ದ ಮೂವರು ಮದ್ಯ ಸೇವಿಸಿದ್ದಾರೆ. ಹಣ ಪಾವತಿ ಮಾಡುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮದ್ಯದ ಬಾಟಲಿಗಳನ್ನು ಒಡೆದು, ಬಾಗಿಲಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ 40 ಸಾವಿರ ರೂ. ನಷ್ಟವಾಗಿದೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ‘ಸಿಟಿ ಸೆಂಟರ್’ ಮಾದರಿ ರೆಡಿಯಾಗಲಿದೆ ಶಿವಮೊಗ್ಗ ಜಿಲ್ಲೆಯ 3 ರೈಲ್ವೆ ನಿಲ್ದಾಣಗಳು

ಕೆಳಗೆ ಬಿದ್ದ ಹಿಂಬದಿ ಸವಾರ, ಆಸ್ಪತ್ರೆಯಲ್ಲಿ ಸಾವು

ತೀರ್ಥಹಳ್ಳಿ : ಸ್ಕೂಟಿ ದಿಢೀರ್ ಬ್ರೇಕ್ ಹಾಕಿದ್ದರಿಂದ ಹಿಂಬದಿ ಸವಾರ (PILLION RIDER) ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ತಾಲೂಕು ಚಿಡುವ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಮಹೇಂದ್ರ ಮತ್ತು ಆತನ ಸ್ನೇಹಿತ ಕುರುವಳ್ಳಿ ವಾಸಿ ನಾಗರಾಜ ಸ್ಕೂಟಿಯಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. ಕೆಲಸದ ಬಳಿಕ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಮಹೇಂದ್ರ ದಿಢೀರ್ ಬ್ರೇಕ್ ಹಾಕಿದ್ದರಿಂದ ನಾಗರಾಜ್ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಒಳಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಐಟಿ ಕಂಪನಿಗಳ ಸಂದರ್ಶನಕ್ಕೆ ಮುಗಿಬಿದ್ದ ಉದ್ಯೋಗಾಕಾಂಕ್ಷಿಗಳು, ಹೇಗಿತ್ತು JOB FAIR?

Leave a Comment