ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 JANUARY 2024
SHIMOGA : ಪೊಲೀಸರು ಬಿಸಿ ಮುಟ್ಟಿಸಿದರೂ ಬೈಕ್‌ಗಳಲ್ಲಿ ಸ್ಟಂಟ್, ವೀಲಿಂಗ್ ಮಾಡುವವರ ಹಾವಳಿ ತಗ್ಗಿಲ್ಲ. ಶಿವಮೊಗ್ಗ ನಗರದ ಮುಖ್ಯ ರಸ್ತೆಯೊಂದರಲ್ಲಿ ವೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಡಿಯೋ ಬೈಕ್‌ನಲ್ಲಿ ಯುವಕನೊಬ್ಬ ವೀಲಿಂಗ್ ಮಾಡಿದ್ದಾನೆ. ಅಡ್ಡ ರಸ್ತೆಯೊಂದರಲ್ಲಿ ವೀಲಿಂಗ್ ಮಾಡುತ್ತ ಮುಖ್ಯ ರಸ್ತೆಗೆ ಬರುವ ಯುವಕ ಅಲ್ಲಿಯೂ ಸ್ಟಂಟ್ ಮಾಡಿದ್ದಾನೆ. ಈ ವಿಡಿಯೋದ ಬ್ಯಾಕ್ ಗ್ರೌಂಡ್‌ನಲ್ಲಿ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ. ಹೆಲ್ಮೆಟ್ ಇಲ್ಲದೆ ಅಪಾಯಕರ ಸ್ಥಿತಿಯಲ್ಲಿ ವಾಹನ ಚಲಾಯಿಸಿದ್ದಾನೆ. ಇನ್ನು, ಆತನ ಹಿಂಬದಿ ಮತ್ತೊಂದು ಬೈಕ್ ಯುವಕರು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಸಮೀಪ ಒಬ್ಬ ಅರೆಸ್ಟ್
ಬೈಕ್ ಸ್ಟಂಟ್ ಮತ್ತು ವೀಲಿಂಗ್ ಕ್ರೇಜ್‌ನಿಂದಾಗಿ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಅಮಾಯಕರ ಪ್ರಾಣಕ್ಕೆ ಕುತ್ತು ಉಂಟಾಗುವ ಆತಂಕವಿದೆ. ಈ ಹಿನ್ನೆಲೆ ಈಚೆಗೆ ವಿಲೀಂಗ್ ಮತ್ತು ಸ್ಟಂಟ್ ಮಾಡಿವವರನ್ನು ಪತ್ತೆ ಹಚ್ಚಿ ಸಂಚಾರ ಪೊಲೀಸರು ದಂಡ ವಿಧಿಸಿದ್ದರು. ಆದರು ವೀಲಿಂಗ್ ಹಾವಳಿ ತಗ್ಗಿಲ್ಲ.
LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






