ನ್ಯಾಯಾಲಯದಲ್ಲಿ ಕೆಲಸ ಗಿಟ್ಟಿಸಲು ನಕಲಿ ಅಂಕಪಟ್ಟಿ ಕೊಟ್ಟಿದ್ದ ಇಬ್ಬರು ಸೇವೆಯಿಂದ ವಜಾ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | SHIMOGA| 16 ಜೂನ್ 2022

ನಕಲಿ ಅಂಕಪಟ್ಟಿ ಹಾಜರುಪಡಿಸಿ ನ್ಯಾಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ ಕೆಲಸ ಪಡೆಯಲು ಅಡ್ಡದಾರಿ ಹಿಡಿದಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Shimoga Nanjappa Hospital

ಎರಡು ಪ್ರಕರಣದಲ್ಲಿ ನಕಲಿ ಅಂಕಪಟ್ಟಿ ಒದಗಿಸಿ ಕೆಲಸ ಪಡೆಯಲಾಗಿತ್ತು. ಈ ಸಂಬಂಧ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು, ನಕಲಿ ಅಂಕಪಟ್ಟಿ ಮೇಲೆ ಸೀಲ್ ಹಾಕಿದ್ದಕ್ಕಾಗಿ ಇಬ್ಬರು ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣ 1

ತೀರ್ಥಹಳ್ಳಿ ಜೆಎಂಎಫ್’ಸಿ ನ್ಯಾಯಾಲಯದಲ್ಲಿ ಆದೇಶ ಜಾರಿಕಾರರಾಗಿದ್ದ ತೀರ್ಥಮ್ಮ ಎಂಬುವವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ತೀರ್ಥಮ್ಮ ಕೆಲಸಕ್ಕೆ ಸೇರುವಾಗ 7ನೇ ತರಗತಿ ಪಾಸಾದ ಅಂಕಪಟ್ಟಿಯನ್ನು ಒದಗಿಸಿದ್ದರು. ಮೂಲ ದಾಖಲೆಗಳ ಪರಿಶೀಲನೆ ನಡೆಸಿದಾಗ ಅಂಕಪಟ್ಟಿ ನಕಲು ಎಂದು ತಿಳಿದು ಬಂದಿತ್ತು. ಹಾಗಾಗಿ ತೀರ್ಥಮ್ಮ ಸೇವೆಯಿಂದ ವಜಾಗೊಂಡಿದ್ದರು. ಆದರೆ ಹೈಕೋರ್ಟ್’ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಥಮ್ಮಳನ್ನು ಸೇವೆಯಿಂದ ವಜಾಗೊಳಿಸುವಂತೆ ಆದೇಶಿಸಿದೆ. ಈಗ ನಕಲಿ ಅಂಕಪಟ್ಟಿ ಒದಗಿಸಿದ್ದಕ್ಕೆ ತೀರ್ಥಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ನಕಲಿ ಅಂಕಪಟ್ಟಿ ಮೇಲೆ ಮುಖ್ಯೋಪಾಧ್ಯಾಯಿನಿ ಅವರ ಸೀಲ್ ಇತ್ತು. ಹಾಗಾಗಿ ಜಾನಕಮ್ಮ ಎಂಬುವವರ ವಿರುದ್ಧವು ಪ್ರಕರಣ ದಾಖಲು ಮಾಡಲಾಗಿದೆ.

ಪ್ರಕರಣ 2

ತೀರ್ಥಹಳ್ಳಿ ಜೆಎಂಎಫ್’ಸಿ ನ್ಯಾಯಾಲಯದಲ್ಲಿ ಅಟೆಂಡರ್ ಆಗಿದ್ದ ಮಂಜಪ್ಪ ಎಂಬಾತ ಕೂಡ 7ನೇ ತರಗತಿಯ ನಕಲಿ ಅಂಕಪಟ್ಟಿ ನೀಡಿ, ಕೆಲಸ ಗಿಟ್ಟಿಸಿಕೊಂಡಿದ್ದ. ಹೈಕೋರ್ಟ್ ಈತನನ್ನು ಸೇವೆಯಿಂದ ವಜಾಗೊಳಿಸಿದೆ. ಹಾಗಾಗಿ ಮಂಜಪ್ಪ ವಿರುದ್ಧವು ಪ್ರಕರಣ ದಾಖಲಾಗಿದೆ.

ಮುಖ್ಯೋಪಾಧ್ಯಾಯರಿಗೆ ಸಂಕಷ್ಟ

ಎರಡು ಪ್ರಕರಣದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾನಕಮ್ಮ ಪ್ರಕರಣದಲ್ಲಿ ಟ್ಯಾಂಕ್ ಮೊಹಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಾನಕಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜಪ್ಪ ಪ್ರಕರಣದಲ್ಲಿ ಹೊನ್ನಾಳಿ ತಾಲೂಕು ಸುರಹೊನ್ನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೇಸರಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ – ಜಿಂಕೆ ಕೊಂಬು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಂಚಾರಿ ದಳ ದಾಳಿ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment