ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸಾಮಾಜಿಕ ಜಾಲತಾಣದಲ್ಲಿ 29 ಸೆಕೆಂಡ್‌ನ ರೀಲ್ಸ್ (Reels) ಅಪ್‌ಲೋಡ್ ಮಾಡಿದ್ದ ಆರು ಯುವಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಕರಣದಲ್ಲಿ ಅಪ್ರಾಪ್ತರು ಇರುವ ಕಾರಣ ಹೆಸರು, ವಿಳಾಸವನ್ನು ಸುದ್ದಿಯಲ್ಲಿ ಪ್ರಕಟಿಸುತ್ತಿಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
29 ಸೆಕೆಂಡ್‌ನ ವಿಡಿಯೋದಲ್ಲಿ ಏನಿದೆ?
ಆರು ಯುವಕರು ಸಿನಿಮಾ ಒಂದರ ಡೈಲಾಗ್ ಬಳಸಿ ರೀಲ್ಸ್ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪರಿಶೀಲಿಸಿ ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ರೀಲ್ಸ್‌ನಲ್ಲಿ ಒಬ್ಬ ಯುವಕ ಲಾಂಗ್ ಹಿಡಿದಿದ್ದ. ಮೂವರು ಯುವಕರು ಚಾಕುಗಳನ್ನು ಹಿಡಿದಿದ್ದರು.
ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ವಿಡಿಯೋ ಮಾಡಿರುವ ಹಿನ್ನೆಲೆ ಆರು ಯುವಕರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟಿಟಿ ವಾಹನ ಬಾಡಿಗೆಗೆ ಪಡೆದವರಿಂದ ಚಾಲಕನ ಮೇಲೆ ಅಟ್ಯಾಕ್, ಟಿವಿ, ಲೈಟ್‌ಗಳು ಪೀಸ್ ಪೀಸ್