ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪಿನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕ್ಷುಲಕ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಯುವಕರು ಕೈ ಕೈ ಮಿಲಾಯಿಸಿದ್ದರು.
ಸಾಗರ ತಾಲೂಕು ತಾಳಗುಪ್ಪ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ಪರಾರಿಯಾಗಿದ್ದಾರೆ. ಓಡಿ ಹೋದ ಯುವಕರ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು, ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೌಶಿಕ್ (22), ವಿನಾಯಕ (25), ಸಂದೀಪ (26), ಅರುಣ್ ಕುಮಾರ್ (29), ಅಭಿಷೇಕ್ (28), ತಿಲಕ್ (30) ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಯುವಕರ ವಿರುದ್ಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು






