SHIVAMOGGA LIVE NEWS | 22 FEBRURARY 2023
SHIMOGA : ತುಂಗಾ ನದಿ ದಂಡೆಯ ಮೇಲೆ ಅಕ್ರಮವಾಗಿ ಮರಳು (sand) ಸಂಗ್ರಹಿಸಿದ್ದ ಆರೋಪ ಸಂಬಂಧ ಸಾಲು ಸಾಲು ಪ್ರಕರಣ ದಾಖಲು ಮಾಡಲಾಗಿದೆ. ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕೇಸ್ 1 : ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗಿತ್ತು. ಪರವಾನಗಿ ಇಲ್ಲಿದೆ ತುಂಗಾ ನದಿ ಬಲ ದಂಡೆಯ ಮೇಲೆ ಮರಳು ಸಂಗ್ರಹಿಸಿಲಾಗಿತ್ತು. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಪರಿಶೀಲನೆ ಬಳಿಕ ಇಲಾಖೆ ವತಿಯಿಂದ ಮರಳು ಸಂಗ್ರಹ ಮಾಡಿದವರ ವಿರುದ್ಧ ದೂರು ನೀಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೇಸ್ 2 : ಹೊಳೆಹನಸವಾಡಿ ಗ್ರಾಮದ ಬಳಿ ತುಂಗಾ ನದಿಯ ದಂಡೆಯ ಮೇಲೆ ಅನಧಿಕೃತವಾಗಿ ಮರಳು (sand) ಸಂಗ್ರಹ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಪರಿಶೀಲನೆ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಕೇಸ್ 3 : ಸೂಗೂರು ಗ್ರಾಮದ ಸಮೀಪದಲ್ಲೂ ತುಂಗಾ ನದಿ ದಂಡೆ ಮೇಲೆ ಅಕ್ರಮವಾಗಿ ಮರಳು ತೆಗೆದು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.