ಶಿವಮೊಗ್ಗ ಲೈವ್.ಕಾಂ | SAGARA NEWS | 2 ನವೆಂಬರ್ 2020
ಜೋಡಿ ಕೊಲೆ, ಸರಣಿ ಕಳ್ಳತನ ಪ್ರಕರಣದ ಹಿನ್ನೆಲೆ ಶರಾವತಿ ಕಣಿವೆಯ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾ ರಕ್ಷಣಾಧಿಕಾರಿ ಸೂಚನೆ ಮೇರೆಗೆ ಬ್ಯಾಕೋಡು ಮತ್ತು ತುಮರಿಯಲ್ಲಿ ತುರ್ತು ಸಾರ್ವಜನಿಕ ಸಭೆ ನಡೆಸಿದ ಡಿವೈಎಸ್‍ಪಿ ವಿನಾಯಕ್ ಶೆಟ್ಟಿಗೇರ್ ಅವರು, ಸಿಸಿಟಿವಿ ಅಳವಡಿಸುವುದಾಗಿ ತಿಳಿಸಿದರು.
ಅಪರಿಚಿತರ ಮಾಹಿತಿ ಕೊಡಿ
ಅಹಿತಕರ ಘಟನೆ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ. ಗ್ರಾಮಕ್ಕೆ ಭೇಟಿ ನೀಡುವ ಅಪರಿಚಿತರ ಕುರಿತು ಗ್ರಾಮಸ್ಥರು ನಿಗಾ ವಹಿಸಬೇಕು. ಅಲ್ಲದೆ ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇದೆ ವೇಳೆ ಡಿವೈಎಸ್‍ಪಿ ವಿನಾಯಕ್ ಶೆಟ್ಟಿಗೇರ್ ಅವರ ಬಳಿ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡರು. ಪಿಎಸ್ಐ ಪುಷ್ಪಾ, ಬ್ಯಾಕೋಡು, ಕಾರ್ಗಲ್ ಠಾಣೆ ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿದ್ದರು.
ಜೋಡಿ ಕೊಲೆ, ಕಳ್ಳರ ಭೀತಿ
ಜೋಡಿ ಕೊಲೆ ಆತಂಕದಲ್ಲಿರುವ ತುಮರಿ ಗ್ರಾಮಸ್ಥರಿಗೆ ಕಳ್ಳರಿಂದ ಭೀತಿ ಶುರುವಾಗಿದೆ. ಹಾಡಹಗಲೆ ಮೂರು ಮನೆಗಳಲ್ಲಿ ಕಳ್ಳತನ ಮಾಡಲಾಗಿತ್ತು. ಇಲ್ಲಿನ ಬ್ರಾಹ್ಮಣಕೆಪ್ಪಿಯಗೆ ಚಕ್ಕೋಡು ರಾಜು, ತುಮರಿಯ ಟೈಲರ್ ಲಕ್ಷ್ಮಣ, ಸಿಗಂದೂರು ಸಮೀಪದ ವ್ಯಾಪಾರಿ ಚುಟ್ಟಿಕೆರೆ ಸಂಜೀವ ಅವರ ಮನೆಯಲ್ಲಿ ಕಳ್ಳತನವಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]