ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022
ಮಕ್ಕಳಾಗದಿರುವುದಕ್ಕೆ ಔಷಧ ಕೊಡುತ್ತೇವೆ ಎಂದು ನಂಬಿಸಿ, ಮಹಿಳೆಯೊಬ್ಬರ ತಾಳಿ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ.
ಶಿವಮೊಗ್ಗದ ವೆಂಕಟೇಶನಗರದಲ್ಲಿ ಘಟನೆ ಸಂಭವಿಸಿದೆ. ಗೃಹಿಣಿಯೊಬ್ಬರಿಗೆ ಮಕ್ಕಳಾಗುವ ಔಷಧ ಕೊಡುತ್ತೇವೆ ಎಂದು ನಂಬಿಸಿ, ಇಬ್ಬರು ಅಪರಿಚಿತರು ದುಷ್ಕೃತ್ಯ ನಡೆಸಿದ್ದಾರೆ.
ಹೇಗಾಯ್ತು ಘಟನೆ?
ವೆಂಕಟೇಶನಗರದಲ್ಲಿ ಮನೆ ಬಳಿ ನೀರು ಹಿಡಿಯುತ್ತಿದ್ದ ಗೃಹಣಿಯನ್ನು ಇಬ್ಬರು ಅಪರಿಚಿತರು ಸಂಪರ್ಕಿಸಿದ್ದಾರೆ. ‘ತಮಗೆ ಮಕ್ಕಳಾಗದಿರುವ ಕುರಿತು ಆಶಾ ಕಾರ್ಯಕರ್ತೆ ತಿಳಿಸಿದ್ದಾರೆ. ನಾವು ಔಷಧ ಕೊಡಲು ಬಂದಿದ್ದೇವೆ’ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಗೃಹಿಣಿ ತಮ್ಮ ಪತಿಗೆ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಪತಿ, ತಮಗೆ ಯಾವುದೆ ಔಷಧ ಬೇಡ ಎಂದು ಇಬ್ಬರನ್ನು ಕಳುಹಿಸಿದ್ದಾರೆ.
ಔಷಧ ಕೊಡಲು ಮತ್ತೆ ಬಂದರು
ಪತಿ ಕೆಲಸಕ್ಕೆ ಹೋದ ಕೆಲವೇ ಹೊತ್ತಿಗೆ ಪುನಃ ಮನೆ ಬಳಿಗೆ ಬಂದ ಅಪರಿಚಿತರು, ಗೃಹಿಣಿಯನ್ನು ಒಪ್ಪಿಸಿದ್ದಾರೆ. ಔಷಧಕ್ಕೆ ಹಣ ಕೊಡುವುದು ಬೇಡ ಎಂದು ನಂಬಿಸಿದ್ದಾರೆ. ಮನೆಯೊಳಗೆ ಪ್ರವೇಶಿಸಿದ್ದಾರೆ. ಕುತ್ತಿಗೆ ಬಳಿ ಎಣ್ಣೆ ಹಚ್ಚಬೇಕಿದೆ. ಹಾಗಾಗಿ ಚಿನ್ನದ ಸರವನ್ನು ತೆಗೆದಿಡುವಂತೆ ಗೃಹಿಣಿಗೆ ತಿಳಿಸಿದ್ದಾರೆ.
ಮಹಿಳೆ ಮಾಂಗಲ್ಯ ಸರವನ್ನು ತೆಗೆದು ಫ್ರಿಡ್ಜ್ ಮೇಲೆ ಇಟ್ಟಿದ್ದಾರೆ. ಇದನ್ನು ಗಮನಿಸಿದ ಕಳ್ಳರು, ಔಷಧ ನೀಡಲು ಬಿಸಿ ನೀರು ಬೇಕು ಎಂದು ಮನವಿ ಮಾಡಿದ್ದಾರೆ. ನೀರು ಕಾಯಿಸಲು ಗೃಹಿಣಿ ಅಡುಗೆ ಮನೆಗೆ ಹೋಗುತ್ತಿದ್ದಂತೆ, ಕಳ್ಳರು ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.
ಮಹಿಳೆಯ ಕೊರಳಲ್ಲಿ ಎರಡು ಎಳೆ ಬಂಗಾರದ ಸರ, ಎರಡು ತಾಳಿ, ಒಂದು ಕಾಸು ಇತ್ತು. ಇದು 40 ಗ್ರಾಂ ತೂಗುತ್ತಿದ್ದು, ಅಂದಾಜು 1.20 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200