ಶಿವಮೊಗ್ಗ ಲೈವ್.ಕಾಂ | SHIMOGA | 14 ಡಿಸೆಂಬರ್ 2019
ಶಿವಮೊಗ್ಗದಲ್ಲಿ ಮತ್ತೊಂದು ಚಿಟ್ ಫಂಡ್ ಗೋಲ್ಮಾಲ್ ಬಳಕಿಗೆ ಬಂದಿದೆ. ಕೋಟಿ ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದ ಚೀಟಿ ಸಂಸ್ಥೆಯ ಮಾಲೀಕ ನಾಪತ್ತೆ ಆಗಿದ್ದಾನೆ. ದುಡ್ಡು ಹೂಡಿದ್ದವರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ನಿತ್ಯ ಪೊಲೀಸ್ ಠಣೆಗೆ ಅಲೆಯುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಬಳಿ ಇದ್ದ ತುಂಗಾ ಚಿಟ್ ಫಂಡ್ ಕಂಪನಿ ಬಾಗಿಲು ಹಾಕಿದೆ. ಇದರ ಮಾಲೀಕ ಶಂಕರನಾಗ್ ಮತ್ತು ರಾಧಾ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಇವರನ್ನು ನಂಬಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದವರು ಕಂಗಾಲಾಗಿದ್ದಾರೆ.
ಒಬ್ಬೊಬ್ಬರದ್ದು ಲಕ್ಷ ಲಕ್ಷ ಹೂಡಿಕೆ
ತುಂಗಾ ಚಿಟ್ ಫಂಡ್ಸ್ ಮತ್ತು ತುಂಗಾ ಸಹಕಾರ ಪತ್ತಿನ ಬ್ಯಾಂಕ್ ಸ್ಥಾಪಿಸಿಕೊಂಡಿದ್ದ ಶಂಕರನಾಗ್, ಹಲವರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಬಹು ಸಮಯದಿಂದ ನಡೆಯುತ್ತಿದ್ದ ಸಂಸ್ಥೆಯಾಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಹಣ ಹೂಡಿಕೆ ಮಾಡಿದ್ದರು. ಆದರೆ ಡಿಸೆಂಬರ್ 10ರಂದು ಶಂಕರನಾಗ್ ಕುಟುಂಬ ಸಹಿತವಾಗಿ ಕಣ್ಮರೆಯಾಗಿದ್ದಾನೆ. ಶಂಕರನಾಗ್ ನಡೆಸುತ್ತಿದ್ದ ತುಂಗಾ ಚಿಟ್ ಫಂಡ್’ನಲ್ಲಿ ನೂರಾರು ಜನರು ಲಕ್ಷ ಲಕ್ಷ ಹೂಡಿಕೆ ಮಾಡಿದ್ದಾರೆ.
25 ಜನರ 40 ಬ್ಯಾಚ್, ಪ್ರತಿದಿನ ಚೀಟಿ
ಹಣ ಕಳೆದುಕೊಂಡವರು ಕೋಟೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದಾರೆ. ಕಂಪ್ಲೇಂಟ್ ಕೊಡಲು ಬಂದವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಮಕ್ಕಳ ಶಿಕ್ಷಣಕ್ಕಾಗಿ, ಮದುವೆಗಾಗಿ, ಮನೆಗಾಗಿ, ಬಿಸ್ನೆಸ್’ಗೆ ಅನುಕೂಲವಾಗಲಿ ಎಂದು ಚೀಟಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಪೈಕಿ, ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾಡನಾಡಿದ ಕೆಲವರು, ತುಂಗಾ ಚಿಟ್ ಫಂಡ್ ಸಂಸ್ಥೆಯಲ್ಲಿ 40 ಬ್ಯಾಚ್’ಗಳನ್ನು ಮಾಡಲಾಗಿತ್ತು. ಒಂದೊಂದು ಬ್ಯಾಚ್’ನಲ್ಲಿ 25 ಜನರಿದ್ದರು. ಪ್ರತಿದಿನ ತುಂಗಾ ಚಿಟ್ ಫಂಡ್ ಸಂಸ್ಥೆಯಲ್ಲಿ ಚೀಟಿ ನಡೆಯುತ್ತಿತ್ತು ಅನ್ನುತ್ತಾರೆ.

ಶಂಕರನಾಗ್’ನನ್ನು ಜನ ನಂಬಿದ್ದೇಕೆ?
ಶಂಕರನಾಗ್, ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯ ಅಧ್ಯಕ್ಷ. ಈ ಸಂಘಟನೆ ಹೆಸರಿನಲ್ಲಿ ಹಲವು ಕಾರ್ಯಕ್ರಮ, ಹೋರಾಟಗಳನ್ನು ನಡಸಿದ್ದರು. ಶಿವಮೊಗ್ಗದ ಪ್ರಮುಖ ರಾಜಕಾರಣಿಗಳು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಿದೆ. ಇನ್ನು, ಬಡ ಮಕ್ಕಳಿಗೆ ಆಹಾರ ಪೂರೈಕೆ ಮಾಡುವುದಾಗಿ ಹೇಳಿಕೊಂಡು, ವಾಹನವನ್ನು ಇಟ್ಟುಕೊಂಡಿದ್ದ ಶಂಕರನಾಗ್, ಕಾರ್ಯಕ್ರಮಗಳಲ್ಲಿ ಉಳಿದ ಆಹಾರ ಕೊಂಡೊಯ್ದು ಅನಾಥ ಮಕ್ಕಳಿಗೆ ನೀಡುತ್ತಿದ್ದರು. ಬ್ಯೂಟಿ ಪಾರ್ಲರ್, ಜಿಮ್ ಸೇರಿದಂತೆ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು ಎನ್ನಲಾಗುತ್ತಿದೆ. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದು, ಪ್ರಮುಖ ರಾಜಕಾರಣಿಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದದ್ದನ್ನು ನೋಡಿ, ಜನರು ಶಂಕರನಾಗ್ ಮತ್ತು ಆತ ನಡೆಸುತ್ತಿದ್ದ ಚಿಟ್ ಫಂಡ್ ಸಂಸ್ಥೆಯನ್ನು ನಂಬಿದ್ದರು.

ಶಂಕರನಾಗ್ ವಿರುದ್ಧ ಸಾಲು ಸಾಲು ಕೇಸ್
ತುಂಗಾ ಚಿಟ್ ಫಂಡ್ ಸಂಸ್ಥೆ ಮಾಲೀಕ ಶಂಕರನಾಗ್ ನಾಪತ್ತೆ ಆಗುತ್ತಿದ್ದಂತೆ ಹಣ ಹೂಡಿಕೆ ಮಾಡಿದವರು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಈಗಾಗಲೇ 70 ಮಂದಿ ದೂರು ನೀಡಿದ್ದಾರೆ. ಬಹುತೇಕರು ಹತ್ತು ಲಕ್ಷದವರೆಗೆ ಹೂಡಿಕೆ ಮಾಡಿದವರು ಇದ್ದಾರೆ. ಪೊಲೀಸ್ ಮೂಲಕಗಳ ಪ್ರಕಾರ ಈವರೆಗೆ ಒಟ್ಟು ಸುಮಾರು 2 ಕೋಟಿ ರೂ.ವರೆಗೆ ಹಣ ಕಳೆದುಕೊಂಡಿರುವುದಾಗಿ ದೂರುಗಳು ದಾಖಲಾಗಿವೆ. ಈ ಮೊತ್ತ ಮತ್ತಷ್ಟು ಹೆಚ್ಚಳ ಆಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಶಂಕರನಾಗ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
A Kannada Organization President has fled shimoga with corers of rupees chit fund money. The case has been registered in Kote Police Station.