ಶಿವಮೊಗ್ಗ ಲೈವ್.ಕಾಂ | 19 ಜೂನ್ 2019
ಚೋರಡಿ ಬಳಿ ಪ್ರವಾಸಿ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವರಲ್ ವಾಹನ ಪಲ್ಟಿಯಾಗಿದೆ. ಇದೇ ವೇಳೆ, ಸಾಗರ ಶಾಸಕ ಹರತಾಳು ಹಾಲಪ್ಪ, ಅದೇ ಮಾರ್ಗದಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಕೂಡಲೇ ಅಪಘಾತದ ಸ್ಥಳಕ್ಕೆ ತೆರಳಿದ ಅವರು, 108 ಆಂಬುಲೆನ್ಸ್’ಗೆ ಕರೆ ಮಾಡಿದರು. ಬಳಿಕ, ಪಲ್ಟಿಯಾದ ವಾಹನದಲ್ಲಿದ್ದವರನ್ನು ಹೊರಗೆ ತರುವಲ್ಲಿ ಶಾಸಕ ಹಾಲಪ್ಪ, ಅವರ ಅಂಗರಕ್ಷಕ ಹೇಮಕೃಷ್ಣ , ಕಾರು ಚಾಲಕ ಸಾರ್ವಜನಿಕರಿಗೆ ನೆರವಾದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಟೆಂಪೊ ಟ್ರಾವಲರ್’ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]