ಮೊಬೈಲ್‌ನಲ್ಲಿದ್ದ ಫೋಟೊ ವಿಚಾರಕ್ಕೆ ಅಣ್ಣ, ತಮ್ಮನ ನಡುವೆ ಕಿರಿಕ್, ಒಬ್ಬರಿಗೆ ಗಂಭೀರ ಗಾಯ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021

ಯುವತಿಯೊಬ್ಬಳ ಫೋಟೊ ವಿಚಾರವಾಗಿ ಸಹೋದರರ ನಡುವೆ ಜಗಳವಾಗಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಏನಿದು ಕೇಸ್?‌ ಯಾಕಾಯ್ತು ಗಲಾಟೆ?

ಮಗಳ ಫೋಟೊ ವಿಚಾರವಾಗಿ ಈರಾನಾಯ್ಕ  ಅವರು ತಮ್ಮ ಸಹೋದರ ರಾಮನಾಯ್ಕ ಜೊತೆಗೆ ಜಗಳವಾಡಿಕೊಂಡಿದ್ದಾರೆ. ರಾಮನಾಯ್ಕ ಅವರ ಮಗನ ಮೊಬೈಲ್‌ನಲ್ಲಿ ಈರಾನಾಯ್ಕ ಅವರ ಮಗಳ ಫೋಟೊ ಇತ್ತು ಅನ್ನುವುದು ಜಗಳಕ್ಕೆ ಪ್ರಮುಖ ಕಾರಣ. ಇದೇ ವಿಚಾರವಾಗಿ ಈರಾನಾಯ್ಕ, ನಾಗನಾಯ್ಕ, ಕಿಶನ್‌, ಅನಿತಾ ಬಾಯಿ ಮತ್ತು ಈರಾನಾಯ್ಕ ಅವರ ಮಗಳು ರಾಮನಾಯ್ಕ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಆಯನೂರು ಸಮೀಪದ ಆನೆಸರ ಚನ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾಮನಾಯ್ಕ ಅವರ ಮೇಲೆ ಕಂದಲಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಅವರನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಹೆಚ್ಚಿನ Shimoga News, Shivamogga News ಮತ್ತು CRIME DIARY, SHIVAMOGGA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜನವರಿ 6, 2021

Leave a Comment