ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 9 NOVEMBER 2024 : ಕುಂಸಿ ಮೆಸ್ಕಾಂ ಮೇಸ್ತ್ರಿ ನಂದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಐವರ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ.
ವಸತಿಗೃಹದಲ್ಲಿ ನಂದೀಶ್ ಆತ್ಮಹತ್ಯೆ
ಕುಂಸಿಯ ಮೆಸ್ಕಾಂ ಕಚೇರಿಯಲ್ಲಿ ಗ್ರೇಡ್ -2 ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ನಂದೀಶ್ (38) ವಸತಿ ಗೃಹದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಶುಕ್ರವಾರ ನಂದೀಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು.
ಐವರ ವಿರುದ್ಧ ಪ್ರಕರಣ ದಾಖಲು
ಪ್ರಕರಣ ಸಂಬಂಧ ಕಚೇರಿಯ ಯುವರಾಜ್ ಸೇರಿ ಹಲವರ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಸ್ಕಾಂ ಗುತ್ತಿಗೆದಾರ ವಿಜಯ್ಕುಮಾರ, ಜಗದೀಶ್, ರವಿ, ಯುವರಾಜ್ ಹಾಗೂ ಯುವರಾಜ್ನ ಸಂಬಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಹೊರಗುತ್ತಿಗೆ ಕೆಲಸಕ್ಕೆಂದು ಯುವರಾಜ ಎಂಬುವವರನ್ನು ಗುತ್ತಿಗೆದಾರ ವಿಜಯ್ಕುಮಾರ್ ಕರೆತಂದಿದ್ದರು. ಆತನನ್ನು ನಂದೀಶ್ ವಿದ್ಯುತ್ ದುರಸ್ಥಿ ಕಾರ್ಯಕ್ಕೆ ಕರೆದೊಯ್ದಾಗ ವಿದ್ಯುತ್ ತಗುಲಿ ಗಾಯಗೊಂಡಿದ್ದರು. ಯುವರಾಜ್ಗೆ ಚಿಕಿತ್ಸೆ ವೆಚ್ಚವನ್ನು ನಂದೀಶ್ ಭರಿಸಿದ್ದರು. ಆದರೆ ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ನಂದೀಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪತ್ನಿ ನೀಡಿದ ದೂರಿನ ಆಧಾರದಲ್ಲಿ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ನೆಹರು ಸ್ಟೇಡಿಯಂಗೆ ಹಿಂತಿರುಗಿದ ವಕೀಲರಿಗೆ ಕಾದಿತ್ತು ಆಘಾತ – 3 ಫಟಾಫಟ್ ಸುದ್ದಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422