SHIVAMOGGA LIVE NEWS | SHIMOGA | 28 ಜೂನ್ 2022
ಕುಟುಂಬದವರು ಮನೆಯಲ್ಲಿ ಇರುವಾಗಲೆ ಬೆಡ್ ರೂಮಿನಲ್ಲಿದ್ದ 25 ಸಾವಿರ ರೂ. ಹಣ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. HOUSE THEFT
ಶರಾವತಿ ನಗರದ 5ನೇ ಅಡ್ಡರಸ್ತೆಯ ವೈದ್ಯರೊಬ್ಬರ ಮನೆಯಲ್ಲಿ ಜೂ.22ರಂದು ಘಟನೆ ಸಂಭವಿಸಿದೆ. ವೈದ್ಯರ ಪತ್ನಿ, ಪುತ್ರ ಮನೆಯಲ್ಲಿದ್ದರು. ಮನೆ ಕೆಲಸದಾಕೆ ಬಂದು ಕೆಲಸ ಮುಗಿಸಿ ತೆರಳಿದ್ದರು. HOUSE THEFT
ಆ ದಿನ ಸಂಜೆ ವೈದ್ಯರು ಮನೆಗೆ ಬಂದು ಪರಿಶೀಲಿಸಿದಾಗ ಬೆಡ್ ರೂಮಿನಲ್ಲಿದ್ದ ಹಣ ನಾಪತ್ತೆಯಾಗಿತ್ತು. 25 ಸಾವಿರ ರೂ. ಹಣ ಕಳ್ಳತನವಾಗಿರುವ ಕುರಿತು ಮನೆಯಲ್ಲಿದ್ದವರನ್ನು ವಿಚಾರಿಸಿದ್ದಾರೆ. ಮನೆ ಕೆಲಸದಾಕೆಯನ್ನು ಕೂಡ ವಿಚಾರಣೆ ಮಾಡಲಾಗಿದೆ. ಯಾರೂ ಹಣ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ .
ಈ ಹಿನ್ನೆಲೆಯಲ್ಲಿ ಕಳ್ಳರು ಒಳನುಗ್ಗಿ ಹಣ ಕದ್ದೊಯ್ದಿರುವ ಶಂಕೆ ಮೇರೆಗೆ ದೂರು ನೀಡಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ರಾತ್ರೋರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.