ಶಿವಮೊಗ್ಗ : ಭಾರತೀಯ ಸೇನೆಯ ಅಧಿಕಾರಿ ಎಂದು ನಂಬಿಸಿ ಶಿವಮೊಗ್ಗದ ವೈದ್ಯೆ (Doctor) ಮತ್ತು ಅವರ ಮನೆಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿಯೊಬ್ಬರಿಗೆ 3.72 ಲಕ್ಷ ರೂ. ಹಣ ವಂಚಿಸಲಾಗಿದೆ. ವಿಡಿಯೋ ಕರೆ ಮಾಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ನಂಬಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎನ್ಸಿಸಿ ಕಚೇರಿಯಿಂದ ಫೋನ್..!
ಶಿವಮೊಗ್ಗದ ಎನ್ಸಿಸಿ ಕಚೇರಿಯಿಂದ ಕ್ಯಾಪ್ಟನ್ ಮಾತನಾಡುತ್ತಿರುವುದಾಗಿ ತಿಳಿಸಿ ವ್ಯಕ್ತಿಯೊಬ್ಬ ವೈದ್ಯೆಗೆ (ಹೆಸರು ಗೌಪ್ಯ) ಕರೆ ಮಾಡಿದ್ದ. ಸೇನಾ ವಾಹನದಲ್ಲಿ ಸುಮಾರು 45 ರೋಗಿಗಳನ್ನು ನಿಮ್ಮ ಕ್ಲಿನಿಕ್ಗೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಈ ಸಂಬಂಧ ಮಾತನಾಡಲು ಕರ್ನಲ್ ಸಂದೀಪ್ ರಾವತ್ ವಿಡಿಯೋ ಕಾಲ್ ಮಾಡುತ್ತಾರೆ. ಅವರ ಜೊತೆಗೆ ಮಾತನಾಡುವಾಗ ಎರಡು ಮೊಬೈಲ್ ಇಟ್ಟುಕೊಳ್ಳಬೇಕು. ಇದು ಸೇನಾ ನಿಯಮ ಎಂದು ತಿಳಿಸಿದ್ದ.
ವಿಡಿಯೋ ಕರೆ ಮಾಡಿದ ಕರ್ನಲ್
ವಿಡಿಯೋ ಕರೆ ಸ್ವೀಕರಿಸಿದ ವೈದ್ಯಗೆ ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತನ್ನನ್ನು ಕರ್ನಲ್ ಸಂದೀಪ್ ರಾವತ್ ಎಂದು ಪರಿಚಯಿಸಿಕೊಂಡಿದ್ದ. ಹಿಂದಿ ಸರಿಯಾಗಿ ಬಾರದ ಹಿನ್ನೆಲೆ ವೈದ್ಯೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೊಬ್ಬರನ್ನು ಕರೆಯಿಸಿಕೊಂಡು ಸೇನಾಧಿಕಾರಿ ಜೊತೆ ಮಾತನಾಡಿಸಿದ್ದರು. ಕರ್ನಲ್ ಸಂದೀಪ್ ರಾವತ್, ವೈದ್ಯೆಯ ಗೂಗಲ್ ಪೇ ಓಪನ್ ಮಾಡಿಸಿ, ತಾನು ಸೂಚಿಸಿದ ನಂಬರ್ಗೆ 49,511 ರೂ. ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಈ ಹಣ ಮರಳಿ ಬರಲಿದೆ. ಇದೆಲ್ಲ ಸೇನಾ ನಿಯಮ ಎಂದು ನಂಬಿಸಿದ್ದ.
ಲಕ್ಷ ಲಕ್ಷ ಲಪಟಾಯಿಸಿದ ಖದೀಮ
ವೈದ್ಯೆಯ ಗೂಗಲ್ ಪೇನಿಂದ ಹಣ ವರ್ಗಾಯಿಸಿಕೊಂಡು ಖಾತೆಯಲ್ಲಿ ಹಣ ಖಾಲಿಯಾದ ಬಳಿಕ ಕರ್ನಲ್ ಸಂದೀಪ್ ರಾವತ್ ವರಸೆ ಬದಲಿಸಿದ್ದ. ವೈದ್ಯೆಗೆ ನೆರವಾಗಲು ಬಂದಿದ್ದ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್ನಿಂದಲು ಹಣ ವರ್ಗಾಯಿಸುವಂತೆ ತಾಕೀತು ಮಾಡಿದ್ದ. ಅಂತೆಯೇ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್ನಿಂದ ಹಣ ವರ್ಗಾಯಿಸಲಾಗಿತ್ತು. ವಿಡಿಯೋ ಕರೆ ಕಡಿತವಾದ ಮೇಲೆ ಪುನಃ ಕರೆ ಮಾಡಿದ ಕರ್ನಲ್ ಸಂದೀಪ್ ರಾವತ್, ನಿಮ್ಮ ಹಣ ನಿಮ್ಮ ಖಾತೆಗೆ ಮರಳಲಿದೆ ಎಂದು ಭರವಸೆ ನೀಡಿದ್ದ.
ಅನುಮಾನಗೊಂಡ ವೈದ್ಯೆ ಮತ್ತು ಬಾಡಿಗೆ ಮನೆಯ ವ್ಯಕ್ತಿ ಕೂಡಲೆ 1930ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಸಿಗಂದೂರು ಲಾಂಚ್, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200