ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 16 FEBRURARY 2023
BHADRAVATHI : ಒಂದಕ್ಕೆ ಎರಡರಷ್ಟು ಹಣ (Double Money) ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 9.85 ಲಕ್ಷ ರೂ. ವಂಚಿಸಲಾಗಿದೆ (Fraud). ಈ ಸಂಬಂಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಿತೀಶ್ ಪಂಡಿತ್ ವಂಚನೆಗೊಳಗಾದವರು. ಚಿಕ್ಕಮಗಳೂರಿನ ಜಾಫರ್ ಮತ್ತು ಮಠೇಶ್ ಎಂಬುವವರು ವಂಚನೆ ಮಾಡಿದ್ದಾರೆ ಎಂದು ನಿತೇಶ್ ಪಂಡಿತ್ ದೂರು ನೀಡಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ನಿತೀಶ್ ಪಂಡಿತ್ ಗೆ ಫೋನ್ ಮೂಲಕ ಜಾಫರ್ ಎಂಬಾತನ ಪರಿಚಯವಾಗಿದ್ದು, ಲಕ್ಕವಳ್ಳಿ ಡ್ಯಾಮ್ ಬಳಿ ಗೋಡೊನ್ ನಲ್ಲಿ 40 ಕೋಟಿ ರೂ. ಇದೆ ಎಂದು ತಿಳಿಸಿದ್ದ. ಎಲ್ಲಾ 100 ರೂ. ನೋಟುಗಳಲ್ಲಿ ಇದ್ದು ಅವುಗಳನ್ನು 500 ರೂ. ನೋಟುಗಳಿಗೆ ಬದಲಾವಣೆ ಮಾಡಿಕೊಡುವಂತೆ ತಿಳಿಸಿದ್ದ. ಬದಲಾವಣೆ ಮಾಡಿಕೊಟ್ಟರೆ ಒಂದಕ್ಕೆ ಎರಡರಷ್ಟು ಹಣ (Double Money) ಕೊಡುವುದಾಗಿ ನಂಬಿಸಿದ್ದ.
ಇದನ್ನೂ ಓದಿ –ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?
25 ಲಕ್ಷ ರೂ. ಕೇಳಿದ್ದ
ಸ್ವಲ್ಪ ದಿನದ ಬಳಿಕ ಪುನಃ ನಿತೇಶ್ ಪಂಡಿತ್ ಗೆ ಕರೆ ಮಾಡಿದ ಜಾಫರ್ ಎಂಬಾತ 500 ರೂ. ನೋಟುಗಳ 25 ಲಕ್ಷ ರೂ. ಹಣ ಹೊಂದಿಸುವಂತೆ ಕೇಳಿದ್ದ. ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ. 10 ಲಕ್ಷ ರೂ. ಹೊಂದಿಸಬಹುದು ಎಂದು ನಿತೇಶ್ ಪಂಡಿತ್ ತಿಳಿಸಿದ್ದರು. ಬಳಿಕ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಂದ ನಿತೇಶ್ ಅವರು 10 ಲಕ್ಷ ರೂ. ಹಣ ಪಡೆದಿದ್ದರು.
ಇದನ್ನೂ ಓದಿ – ಪಾಳು ಮನೆ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಸಾವು, ಕೈ ಮೇಲಿದೆ ‘ಪಾಪಿ ಪ್ರೀತಿ ಕಾವ್ಯ’ ಹಚ್ಚೆ
ಹಣದ ಬಾಕ್ಸ್ ಕೈಗಿಟ್ಟರು
ನಿತೇಶ್ ಪಂಡಿತ್ ಅವರು 10 ಲಕ್ಷ ರೂ. ಹಣದ ಬ್ಯಾಗ್ ಹಿಡಿದು ಜಾಫರ್ ಮತ್ತು ಮಠೇಶ್ ಸೂಚಿಸಿದಂತೆ ಭದ್ರಾವತಿಗೆ ಬಂದಿದ್ದರು. ನಿತೇಶ್ ಜೊತೆಗೆ ಜಗದೀಶ್ ಮತ್ತು ಅಭಿಜಿತ್ ಎಂಬುವವರು ಬಂದಿದ್ದರು. ಜಾಫರ್ ಹೇಳಿದಂತೆ ಬಾರಂದೂರಿನಿಂದ ಭದ್ರಾವತಿ ಕಡೆಗೆ ಹೋಗುವ ರಸ್ತೆಯಲ್ಲಿ ಹೊಟೇಲ್ ಒಂದರ ಬಳಿ ನಿತೀಶ್ ಬಂದಿದ್ದರು. ಕಾರನ್ನು ಹೊಟೇಲ್ ಬಳಿ ನಿಲ್ಲಿಸಿದ್ದರು. ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋದಾಗ ಮರದ ಕೆಳಗೆ ಜಾಫರ್ ಮತ್ತು ಮಠೇಶ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಅವರ ಕೈಗೆ ನಿತೇಶ್ 10 ಲಕ್ಷ ರೂ. ಹಣದ ಬ್ಯಾಗ್ ಕೊಟ್ಟಿದ್ದಾರೆ. ಪರ್ಯಾಯವಾಗಿ ಜಾಫರ್ ಮತ್ತು ಮಠೇಶ್ 100 ರೂ. ನೋಟುಗಳಿರುವ ಬಾಕ್ಸ್ ಒಂದನ್ನು ನಿತೇಶ್ ಕೈಗೆ ಕೊಟ್ಟಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ
ಬಾಕ್ಸ್ ಓಪನ್ ಮಾಡುವಷ್ಟರಲ್ಲಿ ಪರಾರಿ
ಜಾಫರ್ ಮತ್ತು ಮಠೇಶ್ ಪ್ಲೇವುಡ್ ಬಾಕ್ಸ್ ಕೊಟ್ಟಿದ್ದಾರೆ. ನಿತೇಶ್, ಬಾಕ್ಸ್ ಓಪನ್ ಮಾಡಿ ಹಣ ತೋರಿಸಿ ಎಂದು ಸೂಚಿಸಿದ್ದಾರೆ. ಬಾಕ್ಸ್ ನ ಒಂದು ಬದಿ ಮಾತ್ರ ಓಪನ್ ಮಾಡಿದ ಆರೋಪಿಗಳು, ನೂರು ರೂ.ಗಳ ನೋಟುಗಳು ಇರುವುದನ್ನು ತೋರಿಸಿದ್ದಾರೆ. ನಿತೇಶ್ ಅವರು ಬಾಕ್ಸಿನಲ್ಲಿ ಎಷ್ಟು ಹಣವಿದೆ ಅನ್ನುದನ್ನು ಎಣಿಸಬೇಕು ಅಂದಿದ್ದಾರೆ. ಹೋಗಿ ಕಾರು ತೆಗೆದುಕೊಂಡು ಬರುವುದಾಗಿ ತಿಳಿಸಿ ಕಾರಿನ ಬಳಿ ಹೋಗಿದ್ದಾರೆ. ಅಷ್ಟು ಹೊತ್ತಿಗೆ ಜಾಫರ್ ಮತ್ತು ಮಠೇಶ್, 10 ಲಕ್ಷದ ಬ್ಯಾಗಿನೊಂದಿಗೆ ಬೈಕಿನಲ್ಲಿ ಪರಾರಿಯಾಗಿದ್ದರು. ನಿತೇಶ್ ಮತ್ತು ಅವರ ಸ್ನೇಹಿತರು ಕಾರಿನಲ್ಲಿ ಬಾಕ್ಸ್ ತೆಗೆದಾಗ 100 ರೂ. ನೋಟಿನ 14,700 ರೂ. ಮಾತ್ರ ಇತ್ತು. ಉಳಿದಂತೆ ಬಾಕ್ಸ್ ಖಾಲಿಯಾಗಿತ್ತು.
ಇದನ್ನೂ ಓದಿ – ತೋಟದ ಮನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಪುತ್ರ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ
ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ 9.85 ಲಕ್ಷ ರೂ. ಮೋಸ ಮಾಡಿದ ಜಾಫರ್ ಮತ್ತು ಮಠೇಶ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

CLICK HERE TO JOIN SHIVAMOGGA LIVE WHATSAPP GROUP




