ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021
ಡ್ರ್ಯಾಗರ್ ಪ್ರದರ್ಶವನ ಮಾಡಿ ಭಯ ಹುಟ್ಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ರಸ್ತೆಯಲ್ಲಿ ಡ್ರ್ಯಾಗರ್ ಪ್ರದರ್ಶಿಸಿ, ಭೀತಿ ಮೂಡಿಸಿದ್ದ.
ಶಿವಮೊಗ್ಗ ಕೆಎಸ್ಆರ್’ಟಿಸಿ ಬಸ್ ಡಿಪೋ ಬಳಿ ಘಟನೆ ಸಂಭವಿಸಿದೆ. ಬುದ್ಧಾನಗರ ಬಳಿ ವ್ಯಕ್ತಿಯೊಬ್ಬ ಡ್ರ್ಯಾಗರ್ ಹಿಡಿದು, ರೌಡಿಯಂತೆ ವರ್ತಿಸುತ್ತಿದ್ದಾನೆ ಎಂದು ಸಾರ್ವಜನಿಕರು ದೂರು ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಡ್ರ್ಯಾಗರ್ ಹಿಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವುದು ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಹಿಡಿದು ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತನನ್ನು ಮಾರ್ನಮಿ ಬೈಲ್ ನಿವಾಸಿ ಸಯ್ಯದ್ ಮುಜೀಬುಲ್ಲಾ (45) ಎಂದು ತಿಳಿದು ಬಂದಿದೆ.

ಪೊಲೀಸರು ಎದುರಿಗೆ ಬರುತ್ತಿದ್ದಂತೆ ಬೆಚ್ಚಿದ ಸಯ್ಯದ್ ಮುಜೀಬುಲ್ಲಾ, ತೊದಲಿಸಲು ಆರಂಭಿಸಿದ್ದ. ಸಯ್ಯದ್ ಮುಜೀಬುಲ್ಲಾ ಮತ್ತು ಆತನ ಕೈಯ್ಯಲ್ಲಿದ್ದ ಡ್ರ್ಯಾಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200






