ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಫೆಡೆಕ್ಸ್ ಆಫೀಸರ್ ಮತ್ತು ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿ (Officer) ಅಂತೆ ನಟಿಸಿ ಭದ್ರಾವತಿ ಮೂಲದ 28 ವರ್ಷದ ಇಂಜಿನಿಯರ್‌ಗೆ 9 ಲಕ್ಷ ರೂ. ವಂಚಿಸಲಾಗಿದೆ. ಇಂಜಿನಿಯರ್‌ಗೆ ಗೊತ್ತಾಗದ ಹಾಗೆ ಆಕೆಯ ಹೆಸರಿನಲ್ಲಿ ಪರ್ಸನಲ್ ಲೋನ್ ಪಡೆದು, ಆಕೆಯ ಸಂಬಳದ ಹಣವನ್ನೂ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಪಾರ್ಸಲ್‌ನಲ್ಲಿ ಡ್ರಗ್ಸ್, ಲ್ಯಾಪ್‌ಟಾಪ್, ಪಾಸ್‌ಪೋರ್ಟ್
ಅಪರಿಚಿತ ನಂಬರ್‌ನಿಂದ ಯುವತಿಗೆ (ಇಂಜಿನಿಯರ್) ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಮ್ಮ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕೊರಿಯರ್ ಬಂದಿದೆ. ಇದರಲ್ಲಿ ಡ್ರಗ್ಸ್, ಲ್ಯಾಪ್‌ಟಾಪ್, ಇರಾನ್ ದೇಶದ ಪಾಸ್‌ಪೋರ್ಟ್ ಇದೆ ಎಂದು ಬೆದರಿಸಿದ್ದ. ಈ ಸಂಬಂಧ ವಿಚಾರಣೆಗೆ ಮುಂಬೈನ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿಗೆ ಕರೆ ಕನೆಕ್ಟ್ ಮಾಡುವಂತೆ ತಿಳಿಸಿದ್ದ. ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ಆಫೀಸರ್‌ನಂತೆ ಯುನಿಫಾರಂ ಧರಿಸಿದ್ದ. ಆತ ಯುವತಿಯ ಹಿನ್ನೆಲೆ ಕುರಿತ ಮಾಹಿತಿ ಸಂಗ್ರಹಿಸಿದ್ದ.
ಇಂಜಿನಿಯರ್‌ಗೆ ಗೊತ್ತಿಲ್ಲದಂತೆ ಲೋನ್
ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಅಷ್ಟೂ ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ಯುವತಿ ತನ್ನ ತಾಯಿಯ ಖಾತೆಗೆ ಉಳಿಕೆ ಹಣ ವರ್ಗಾಯಿಸಿದ್ದರು. ಇದಾಗಿ ಕೆಲವೆ ಸಮಯಕ್ಕೆ ಯುವತಿ ಖಾತೆಗೆ 7.60 ಲಕ್ಷ ರೂ. ಹಣ ಬಂದ ಮೆಸೇಜ್ ಬಂದಿತ್ತು. ಆಗ ಆ ಆಧಿಕಾರಿ, ಇದು ಡ್ರಗ್ಸ್ ದಂಧೆಯ ಹಣ. ಇದನ್ನು ಕೂಡಲೆ ರಿಜರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಎಂದು ಅಕೌಂಟ್ ನಂಬರ್ ನೀಡಿದ್ದ. ಅಲ್ಲದೆ ಇನ್ಮುಂದೆ ಈ ಖಾತೆಗೆ ಯಾವುದೇ ಹಣ ಬಂದರೂ ಅದನ್ನು ಕೂಡಲೆ ರಿಜರ್ವ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದ. ನಂಬಿದ ಯುವತಿ ತನ್ನ ಸಂಬಳದ ಹಣವನ್ನೂ ಆತ ನೀಡಿದ್ದ ಖಾತೆಗೆ ವರ್ಗಾಯಿಸಿದ್ದಳು.
ಮೇಲ್ ಚೆಕ್ ಮಾಡಿದಾಗ ಶಾಕ್
ಈ ಬೆಳವಣಿಗೆ ಬಳಿಕ ಯುವತಿ ಈ ಮೇಲ್ ಚೆಕ್ ಮಾಡುವಾಗ ತಮಗೆ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಸಾಂಕ್ಷನ್ ಮಾಡಲಾಗಿದೆ ಎಂದು ಮಾಹಿತಿ ಬಂದಿತ್ತು. ಪ್ರತಿ ತಿಂಗಳು 18,276 ರೂ. ಇಎಂಐ ಪಾವತಿಸುವಂತೆ ಸೂಚಿಸಲಾಗಿತ್ತು. ಇಂಜಿನಿಯರ್ ಯುವತಿಗೆ ಗೊತ್ತಾಗದ ಹಾಗೆ ಆಕೆಯ ಮಾಹಿತಿ ಪಡೆದು 7.60 ಲಕ್ಷ ರೂ. ಪರ್ಸನಲ್ ಲೋನ್ ಸಾಂಕ್ಷನ್ ಮಾಡಿಸಿಕೊಂಡು ವರ್ಗಾಯಿಸಿಕೊಳ್ಳಲಾತ್ತು. 1.40 ಲಕ್ಷ ರೂ. ಸಂಬಳದ ಹಣವನ್ನು ಟ್ರಾನ್ಸ್‌ಫರ್ ಮಾಡಿಕೊಳ್ಳಲಾಗಿತ್ತು. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಡಾ. ಧನಂಜಯ ಸರ್ಜಿಗೆ ಅದ್ಧೂರಿ ಸ್ವಾಗತ, ತೆರೆದ ವಾಹನದಲ್ಲಿ ಮೆರವಣಿಗೆ