SHIVAMOGGA LIVE NEWS | BHADARAVATHI| 14 ಜೂನ್ 2022
ಮೆಸ್ಕಾಂ ಬಿಲ್ ಕಲೆಕ್ಟರ್ ಎಂದು ಹಣ ವಸೂಲಿ ಮಾಡಿ, ಜನರನ್ನು ವಂಚಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬ ಕಂಬಿ ಎಣಿಸುವಂತಾಗಿದೆ. ಸಾರ್ವಜನಿಕರೆ ಹಿಡಿದು ಆತನನ್ನು ಮೆಸ್ಕಾಂ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭದ್ರಾವತಿ ಹಳೇ ನಗರದ ಕುಂಬಾರ ಬೀದಿಯಲ್ಲಿ ಘಟನೆ ಸಂಭವಿಸಿದೆ. ತಾನು ಮೆಸ್ಕಾಂ ಬಿಲ್ ಕಲೆಕ್ಟರ್ ಎಂದು ಮಹಿಳೆಯೊಬ್ಬರನ್ನು ವಂಚಿಸಲು ಮುಂದಾಗಿದ್ದಾಗ, ಸಾರ್ವಜನಿಕರೆ ಈತನನ್ನು ಹಿಡಿದಿದ್ದಾರೆ. FAKE BILL COLLECTOR
ಏನಿದು ಘಟನೆ?
ಕುಂಬಾರ ಬೀದಿಯ ಶಾಂತಮ್ಮ ಎಂಬುವವರ ಮನೆ ಬಳಿ ಬಂದ ಅಪರಿಚಿತನೊಬ್ಬ ತನ್ನನ್ನು ಮೆಸ್ಕಾಂ ಬಿಲ್ ಕೆಲೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ‘ಮೆಸ್ಕಾಂ ಕೌಂಟರ್’ಗೆ ಹೋಗಿ ಪಾವತಿಸಿದರೆ ಬಿಲ್ ಹಣ ಹೆಚ್ಚಾಗಲಿದೆ. ತನ್ನ ಬಳಿ ಪಾವತಿ ಮಾಡಿದರೆ ಕಡಿಮೆ ಆಗಲಿದೆ’ ಎಂದು ನಂಬಿಸಲು ಯತ್ನಿಸಿದ್ದಾನೆ.
ಅಲ್ಲದೆ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ತಂದು ಕೊಡುವಂತೆ ಸೂಚನೆಯನ್ನು ನೀಡಿದ್ದಾನೆ. ಈತನ ವರಸೆ ಗಮನಿಸಿದ ಸ್ಥಳೀಯರಿಗೆ ಅನುಮಾನ ವ್ಯಕ್ತವಾಗಿದೆ. ಕೂಡಲೆ ಆತನನ್ನು ಹಿಡಿದುಕೊಂಡು ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕ್ಷಣಕ್ಕೊಂದು ಹೆಸರು
ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನಕಲಿ ಬಿಲ್ ಕಲೆಕ್ಟರ್ ತಬ್ಬಿಬಾದ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬೀರಪ್ಪ ಅವರು ಆತನನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಕ್ಷಣಕ್ಕೊಂದು ಹೆಸರು ಹೇಳಿ ಗೊಂದಲ ಸೃಷ್ಟಿಸಿದ.
ಬಿಲ್ ಕಲೆಕ್ಟರ್ ಎಂದು ಜನರನ್ನು ವಂಚಿಸಲು ಮುಂದಾಗಿದ್ದವನನ್ನು ಹುಬ್ಬಳ್ಳಿಯ ಮಂಜುನಾಥ್ ಎಂದು ಗುರುತಿಸಲಾಗಿದೆ. ಆತನನ್ನು ಹಳೆ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಎಂಬ ಹುದ್ದೆ ಇಲ್ಲ. ಸಾರ್ವಜನಿಕರು ಇಂತಹ ವಂಚಕರ ಮಾತನ್ನು ನಂಬಬಾರದು. ಮೆಸ್ಕಾಂ ನಿಗದಿಪಡಿಸಿರುವ ಕೌಂಟರ್ ಮತ್ತು ಆನ್ ಲೈನ್ ಮೂಲಕ ಮಾತ್ರ ಬಿಲ್ ಪಾವತಿ ಮಾಡಬಹುದು ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬೀರಪ್ಪ ಅವರು ಜನರಿಗೆ ತಿಳಿಸಿದರು.
ಇದನ್ನೂ ಓದಿ – ಗೋಂದಿ ಚಾನಲ್ ಏರಿ ಮೇಲೆ ಅಂದರ್ ಬಾಹಾರ್ ಜೂಜಾಟ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.