Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ 2 ತಿಂಗಳಲ್ಲಿ 3 ಕೇಸ್, ಏನಿದು ಪ್ರಕರಣ? ಹೇಗೆ ನಡೆಯುತ್ತಿದೆ ದುಷ್ಕೃತ್ಯ?

ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ 2 ತಿಂಗಳಲ್ಲಿ 3 ಕೇಸ್, ಏನಿದು ಪ್ರಕರಣ? ಹೇಗೆ ನಡೆಯುತ್ತಿದೆ ದುಷ್ಕೃತ್ಯ?

16/01/2023 9:42 AM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 16 JANUARY 2023

SHIMOGA : ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಮಹಿಳೆಯರನ್ನೆ ಟಾರ್ಗೆಟ್ (target women) ಮಾಡಿಕೊಂಡು ಅವರ ಚಿನ್ನದ ಸರಗಳನ್ನು ಲಪಟಾಯಿಸುತ್ತಿದ್ದಾರೆ.

 

» ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಎಲ್ಲೆಲ್ಲಿ ಏನೇನಾಗಿದೆ?

 ಘಟನೆ 1 : ಗಾಂಧಿ ನಗರ 

ಶಿವಮೊಗ್ಗದ ಗಾಂಧಿ ನಗರದಲ್ಲಿ ಬೈಕಿನಲ್ಲಿ ಬಂದ ಇಬ್ಬರು, ನಡೆದು ಹೋಗುತ್ತಿದ್ದ ಮಹಿಳೆಯನ್ನು ತಡೆದಿದ್ದಾರೆ. ನಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ. ಇಲ್ಲಿ ಕೊಲೆಯಾಗಿದೆ. ಚಿನ್ನದ ಸರ ಹಾಕಿಕೊಂಡು ಹೋಗಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದೃಷ್ಟವಶಾತ್ ಮಹಿಳೆ ಚಿನ್ನದ ಸರ ಬಿಚ್ಚಲಿಲ್ಲ.

 ಘಟನೆ 2 : ವಿದ್ಯಾನಗರ 

ವಿದ್ಯಾನಗರ ಜಗದಂಬ ಬೀದಿಯ ಮೇರಿ ಜೋಸ್ಫಿನ್ ಅವರು ನಡೆದು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ‘ತಾವು ಪೊಲೀಸರು’ ಎಂದು ಪರಿಚಯಿಸಿಕೊಂಡಿದ್ದಾರೆ.  ‘ಒಡವೆಗಳನ್ನು ಹಾಕಿಕೊಂಡು ಹೀಗೆಲ್ಲ ಓಡಾಡಬಾರದು. ಎಲ್ಲವನ್ನು ಈಗಲೆ ಬಿಚ್ಚಿ ಬ್ಯಾಗಿನಲ್ಲಿ ಹಾಕಿಕೊಳ್ಳಿ’ ಎಂದು ಆದೇಶಿಸಿದ್ದಾರೆ. ಸರ, ಬಳೆಯನ್ನು ಬಿಚ್ಚಿಸಿ, ತಾವೇ ಮೇರಿ ಜೋಸ್ಫಿನ್ ಅವರ ಬ್ಯಾಗಿನಲ್ಲಿ ಇಡುವಂತೆ ನಟಿಸಿದ್ದಾರೆ. ಮನೆಗೆ ಹೋಗಿ ಮೇರಿ ಜೋಸ್ಫಿನ್ ಅವರು ಪರಿಶೀಲಿಸಿದಾಗ 3.40 ಲಕ್ಷ ರೂ. ಮೌಲ್ಯದ ಒಡವೆಗಳು ಇರಲಿಲ್ಲ.

Police-Jeep-in-Shimoga-city

 ಘಟನೆ 3 : ಎನ್.ಟಿ.ರಸ್ತೆ 

ಹೊನ್ನಾಳಿಯ ಪಾರ್ವತಮ್ಮ ಅವರು ತನ್ನ ಸಹೋದರನ ಮನೆಗೆ ಭೇಟಿ ನೀಡಲು ಶಿವಮೊಗ್ಗಕ್ಕೆ ಬಂದಿದ್ದರು. ಬಸ್ ಇಳಿದು ಎನ್.ಟಿ.ರಸ್ತೆ ಮೂಲಕ ಸುಂದರ ಆಶ್ರಯ ಹೊಟೇಲ್ ಪಕ್ಕ ಗೌಡ ಸಾರಸ್ವತ ಕಲ್ಯಾಣ ಮಂದಿರಕ್ಕೆ ಹೋಗುವ ರಸ್ತೆಗೆ ತೆರಳುತ್ತಿದ್ದರು. ಅಲ್ಲೆ ನಿಂತಿದ್ದ ಮೂವರು, ತಾವು ಪೊಲೀಸರು ಎಂದು ಪರಿಚಯಿಸಿಕೊಂಡು ಪಾರ್ವತಮ್ಮ ಅವರನ್ನು ತಡೆದಿದ್ದಾರೆ. ‘ಹೀಗೆಲ್ಲ ಚಿನ್ನದ ಸರ ಹಾಕಿಕೊಂಡು ಹೋದರೆ ಕೊಲೆ ಮಾಡುತ್ತಾರೆ’ ಎಂದು ಹೆದರಿಸಿದ್ದಾರೆ. ಪಾರ್ವತಮ್ಮ ಅವರ ಚಿನ್ನದ ಸರವನ್ನು ಬಿಚ್ಚಿಸಿ, ಒಂದು ಪೇಪರ್ ನಲ್ಲಿ ಪೊಟ್ಟಣ ಕಟ್ಟಿದ್ದಾರೆ. ಸಹೋದರನ ಮೆನಗೆ ಹೋಗಿ ಪೊಟ್ಟಣ ತೆಗೆದಾಗ ನಕಲಿ ಚಿನ್ನದ ಸರವಿತ್ತು. ಜ.14ರಂದು ಘಟನೆ ಸಂಭವಿಸಿದೆ.

 ಘಟನೆ 4 : ಸವಾರ್ ಲೈನ್ ರಸ್ತೆ 

ವೈದ್ಯರೊಬ್ಬರ ಮನೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾಂತಮ್ಮ ಎಂಬುವವರನ್ನು ತಡೆದು, ತಾವು ಪೊಲೀಸ್ ಎಂದು ನಂಬಿಸಿದ್ದಾರೆ. ಆಕೆಯ ಕೊರಳಲ್ಲಿದ್ದ ಸರವನ್ನು ಬಿಚ್ಚಿಸಿ ಪೊಟ್ಟಣ ಕಟ್ಟಿ ಕೊಟ್ಟು, ಬೈಕಿನಲ್ಲಿ ತೆರಳಿದ್ದಾರೆ. ಜ.14ರಂದು ಮಧ್ಯಾಹ್ನ ಸವಾರ್ ಲೈನ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮನೆಗೆ ತೆರಳಿ ಪೊಟ್ಟಣ ತೆಗೆದಾಗ ನಕಲಿ ಚಿನ್ನದ ಸರವಿತ್ತು.

ನಕಲಿ ಪೊಲೀಸ್ ಹಾವಳಿ

ಶಿವಮೊಗ್ಗ ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ನಾಲ್ಕು ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ (target women) ಮಾಡಿದ್ದಾರೆ. 3 ಪ್ರಕರಣದಲ್ಲಿ ಮಹಿಳೆಯರ ಸರ, ಬಳೆಗಳನ್ನು ಲಪಟಾಯಿಸಲಾಗಿದೆ. ಕೋಟೆ ಠಾಣೆಯಲ್ಲಿ ಒಂದು, ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Shimoga Live News Webiste 3 million views

ಒಂದೇ ರೀತಿಯ ಕಾರ್ಯಾಚರಣೆ

ನಕಲಿ ಪೊಲೀಸರು ನಾಲ್ಕು ಕಡೆಯು ಒಂದೇ ರೀತಿ ದುಷ್ಕೃತ್ಯ ಎಸಗಿದ್ದಾರೆ. ಹಾಗಾಗಿ ಇಂತಹವರ ಕುರಿತು ಜನರು ಜಾಗೃತರಾಗಬೇಕಿದೆ. ಮಹಿಳೆಯರು ತಮ್ಮ ಚಿನ್ನಾಭರಣದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.

  • ನಾಲ್ಕು ಪ್ರಕರಣದಲ್ಲಿಯು ತಾವು ಪೊಲೀಸ್ ಎಂದು ಪರಿಚಯಿಸಿಕೊಂಡು, ಮಹಿಳೆಯರಲ್ಲಿ ಭರವಸೆ ಮೂಡುವಂತೆ ಮಾಡಿದ್ದಾರೆ. ಆ ಬಳಿಕ ಕೃತ್ಯ ಎಸಗಿದ್ದಾರೆ. ಚಿನ್ನಾಭರಣ ಬಿಚ್ಚಿಸಿಕೊಂಡ ಮರು ಕ್ಷಣ ಅಲ್ಲಿಂದ ಕಾಲು ಕಿತ್ತಿದ್ದಾರೆ.
  • ಮೂರು ಪ್ರಕರಣದಲ್ಲಿಯು ಜನ ಸಂಚಾರ ಕಡಿಮೆ ಇರುವ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಹಬ್ಬಗಳಂದೆ ಒಂಟಿ ಮಹಿಳೆಯರನ್ನೆ ಇವರು ಟಾರ್ಗೆಟ್ ಮಾಡಿಕೊಂಡಿದ್ದಾರೆ.
  • ಮಹಿಳೆಯರಲ್ಲಿ ಭಯ ಹುಟ್ಟಿಸಿ ಕೃತ್ಯ ಎಸಗಿದ್ದಾರೆ. ‘ಕೊಲೆಯಾಗಿದೆ’, ‘ಕೊಲೆ ಮಾಡುತ್ತಾರೆ’ ಎಂದು ಜೀವ ಭಯ ಮೂಡಿಸಿ, ಚಿನ್ನಾಭರಣಗಳನ್ನು ಬಿಚ್ಚಿಸಿದ್ದಾರೆ.
  • ಚಿನ್ನಾಭರಣವನ್ನು ಬಿಚ್ಚಿಸಿದ ನಕಲಿ ಪೊಲೀಸರು ತಾವೇ ಪೊಟ್ಟಣ ಕಟ್ಟಿದ್ದಾರೆ. ನಕಲಿ ಚಿನ್ನಾಭರಣವನ್ನು ಬ್ಯಾಗಿನಲ್ಲಿ ಇಟ್ಟು ಕಳುಹಿಸಿದ್ದಾರೆ.

ತಕ್ಷಣ ಪೊಲೀಸರಿಗೆ ಫೋನ್ ಮಾಡಿ

ಯಾರಂದರೆ ಅವರು ತಮ್ಮನ್ನು ತಾವು ಪೊಲೀಸರು ಎಂದು ಪರಿಚಯಿಸಿಕೊಂಡಾಗ ಜನರು ಎಚ್ಚರ ವಹಿಸಬೇಕಿದೆ. ತಕ್ಷಣಕ್ಕೆ ಪೊಲೀಸ್ ಕಂಟ್ರೋಲ್ ರೂಂಗೆ ಅಥವಾ 112 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕಿದೆ. ಆಗ ಕಳ್ಳರ ಪತ್ತೆ ಕಾರ್ಯ ಸುಲಭವಾಗಲಿದೆ.

ಇದನ್ನೂ ಓದಿ – ಶಿವಮೊಗ್ಗದ ಮಹಿಳೆಯರೆ ಎಚ್ಚರ, ಹೀಗೂ ಕಳ್ಳತನವಾಗಬಹುದು ಲಕ್ಷಾಂತರ ಮೌಲ್ಯದ ನಿಮ್ಮ ಚಿನ್ನಾಭರಣ

Shivamogga Live | Whatsapp7411700200
CLICK HERE TO JOIN SHIVAMOGGA LIVE WHATSAPP GROUP CLICK HERE TO JOIN SHIVAMOGGA LIVE WHATSAPP GROUP

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Shivamogga-Live-News-New-Columns ಇನ್ಮುಂದೆ ಶಿವಮೊಗ್ಗ ಲೈವ್ ಅಂದರೆ ಬರಿ ಸುದ್ದಿಯಲ್ಲ, ಇದು ನಮ್ಮೂರು ಅಂತಾ ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡುತ್ತೇವೆ
Next Article shimoga dc office ಶಿವಮೊಗ್ಗದಲ್ಲಿ ಕಂದಾಯ ಸಚಿವರ ವಾಸ್ತವ್ಯಕ್ಕೆ ಗ್ರಾಮ ನಿಗದಿ, ದಿನಾಂಕ ಫಿಕ್ಸ್, ತಹಶೀಲ್ದಾರ್ ನೇತೃತ್ವದಲ್ಲಿ ಮೀಟಿಂಗ್

ಇದನ್ನೂ ಓದಿ

140525 JNNCE engineering college in Shimoga
COLLEGE NEWSSHIVAMOGGA CITY

ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್‌ ಕೋಟಾದ ಸೀಟುಗಳು ಲಭ್ಯ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
14/05/2025
140525 SLV Book House Sharavathi Nagara in Shimoga city
SHIVAMOGGA CITY

ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
14/05/2025
130525 CS Shadakshari Press meet in shimoga
SHIVAMOGGA CITY

ಶಿವಮೊಗ್ಗದಲ್ಲಿ ಮೂರು ದಿನ ರಾಜ್ಯಮಟ್ಟದ ಸ್ಪರ್ಧೆಗಳು, ಭಾಗವಹಿಸ್ತಿದ್ದಾರೆ ಸಾವಿರ ಸಾವಿರ ಸರ್ಕಾರಿ ನೌಕರರು, ಹೇಗಿದೆ ವ್ಯವಸ್ಥೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
13/05/2025
BJP-President-BY-Vijayendra-Press-meet-in-shimoga.
POLITICSSHIVAMOGGA CITY

ಬಿಜೆಪಿಯಿಂದ ರಾಜ್ಯಾದ್ಯಂತ ತಿರಂಗ ಯಾತ್ರೆ, ಏನಿದು ಯಾತ್ರೆ? ಎಲ್ಲೆಲ್ಲಿ ಯಾವಾಗ ನಡೆಯುತ್ತೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
13/05/2025
120525-SN-Channabasappa-visits-kote-police-station.webp
CRIME DIARYSHIVAMOGGA CITY

ಶಿವಮೊಗ್ಗದಲ್ಲಿ ಪಾಕಿಸ್ತಾನದ ಪರ ವಾಟ್ಸಪ್ ಸ್ಟೇಟಸ್, ಬಿಜೆಪಿ ಆಕ್ರೋಶ, ಎಂಎಲ್‌ಎ ಗರಂ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/05/2025
Rambapuri-Swamiji-at-mandli-in-Shimoga-city
SHIVAMOGGA CITY

ಶಿವಮೊಗ್ಗದ ಮಂಡ್ಲಿ ದೇವಸ್ಥಾನಕ್ಕೆ ರಂಭಾಪುರ ಶ್ರೀ ಭೂಮಿ ಪೂಜೆ, ಏನೆಲ್ಲ ಆಶೀರ್ವಚನ ನೀಡಿದರು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/05/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?