ಚಿತ್ರದುರ್ಗದ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಶಿವಮೊಗ್ಗ ಕೋರ್ಟ್‌ನಲ್ಲಿ ಆರೋಪಿಗಳಿಗೆ ಜಾಮೀನು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 30 JANUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಶಿವಮೊಗ್ಗ ನ್ಯಾಯಾಲಯದಲ್ಲಿ (COURT) ಐವರು ಆರೋಪಿಗಳಿಗೆ ಜಾಮೀನು ನೀಡಿದ್ದಾನೆ. ಆರೋಪಿಯೊಬ್ಬ ವಿಚಾರಣೆಗೆ ಹಾಜರಾಗದಿದ್ದಾಗ ಜಾಮೀನುದಾರನಿಗೆ ನೊಟೀಸ್‌ ಜಾರಿಯಾಗಿದೆ. ಆಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣವೊಂದರ ಆರೋಪಿಗಳಾದ ಇಬ್ರಾಹಿಂ ಖಲೀಲ್‌, ಫೈರೋಜ್‌, ಅರ್ಬಾಜ್‌, ನಯಾಜ್‌ ಅಹಮದ್‌, ಸುಹೇಲ್‌ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಜಗದೀಶ್‌ ಎಂಬುವವರು ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನಾಗಿದ್ದರು.

140823-Jayanagara-Police-StationJAYANA

ಜಾಮೀನುದಾರನಿಗೆ ನೊಟೀಸ್‌ ಜಾರಿ

ಪ್ರಕರಣದ ಐದನೇ ಆರೋಪಿ ಸುಹೇಲ್‌ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಆಗ ಜಾಮೀನುದಾರ ಜಗದೀಶ್‌ಗೆ ನೊಟೀಸ್‌ ಜಾರಿಯಾಗಿತ್ತು. ನ್ಯಾಯಾಲಯಕ್ಕೆ ಹಾಜರಾದ ಜಗದೀಶ್‌, ತಾನು ಯಾರಿಗೂ ಜಾಮೀನು ನೀಡಿಲ್ಲ. ಪ್ರಮಾಣಪತ್ರದಲ್ಲಿರುವ ಫೋಟೊ ತನ್ನದಲ್ಲ. ಆರೋಪಿಗಳ್ಯಾರೂ ತನಗೆ ಪರಿಚಯವಿಲ್ಲ ಎಂದು ನ್ಯಾಯಾಧೀಶರ ಮುಂದೆ ತಿಳಿಸಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಜಾಮೀನುದಾರ ಎಂದು ಬಿಂಬಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿ, ಆತನನ್ನು ಕರೆತಂದಿದ್ದ ನಸರುಲ್ಲಾ, ಪ್ರಕರಣದ ಐವರು ಆರೋಪಿಗಳ ವಿರುದ್ಧ ನ್ಯಾಯಾಲಯದ ಸೂಚನೆ ಮೇರೆಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಭದ್ರಾವತಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಏನೆಲ್ಲ ಹೇಳಿದರು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment