SHIVAMOGGA LIVE NEWS | 24 NOVEMBER 2022
SHIMOGA | ಸೇವಾ ನ್ಯೂನತೆ ಎಸಗಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಮೃತರ ವಾರಸುದಾರರ ಗಮನಕ್ಕೆ ತಾರದೆ ಅವರ ಖಾತೆಯಿಂದ ಸಾಲದ ಖಾತೆಗೆ ಹಣ ವರ್ಗಾಯಿಸಲಾಗಿದೆ. ಮೃತರ ಕುಟುಂಬದವರು ಇದರ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. (fine for sbi bank)
ಶಿವಮೊಗ್ಗದ ನಿವಾಸಿ ಲತಾ ರಮೇಶ್ ಮತ್ತು ಅವರ ಮಕ್ಕಳು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗದ ಪ್ರಧಾನ ವ್ಯವಸ್ಥಾಪಕರು, ಧಾರವಾಡದ ಹೊಸ ಯಲ್ಲಾಪುರ ಬ್ರಾಂಚ್ ವ್ಯವಸ್ಥಾಪಕರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
(fine for sbi bank)
ಸೇವಾ ನ್ಯೂನತೆಯ ಆರೋಪ
ರಮೇಶ್ ಅವರು ಸೇನೆಯಲ್ಲಿದ್ದು ನಿವೃತ್ತರಾಗಿದ್ದರು. ಮನೆ ಕಟ್ಟಲು ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 17.60 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ವಿಮಾ ಸೌಲಭ್ಯ ಪಡೆದಿದ್ದರು. ಅದಕ್ಕಾಗಿ 80 ಸಾವಿರ ರೂ. ಹೆಚ್ಚುವರಿ ಸಾಲ ಪಡೆದಿದ್ದರು. ಆದರೆ ಅದನ್ನು ಅಧಿಕೃತಗೊಳಿಸುವಲ್ಲಿ ವಿಫಲರಾಗಿದ್ದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಅಡಕೆ ಬೆಳೆಗಾರನ ಮನ ಗೆದ್ದರೆ ಎಂಎಲ್ಎ ಆಗುವುದು ಖಚಿತ, ಯಾಕೆ? ಇಲ್ಲಿದೆ 4 ಕಾರಣ
ರಮೇಶ್ ಅವರು ತೀರಿಕೊಂಡ ಬಳಿಕ ಧಾರವಾಡದಲ್ಲಿರುವ ಅವರ ಬ್ಯಾಂಕ್ ಖಾತೆಯಿಂದ, ಶಿವಮೊಗ್ಗದ ಬ್ಯಾಂಕಿನಲ್ಲಿರುವ ಸಾಲದ ಖಾತೆಗೆ ಹಣ ವರ್ಗಾವಣೆಯಾಗಿದೆ. ಕುಟುಂಬದವರ ಒಪ್ಪಿಗೆ ಪಡೆಯದೆ ಹಣ ವರ್ಗಾವಣೆ ಮಾಡಿರುವುದು ಬ್ಯಾಂಕ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆಪಾದಿಸಿದ ರಮೇಶ್ ಅವರ ಪತ್ನಿ ಲತಾ ಮತ್ತು ಮಕ್ಕಳು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
(fine for sbi bank)
‘ಹಣ ಹಿಂತಿರುಗಿಸಿ, ದಂಡ ಕಟ್ಟಿ’
ಕುಟುಂಬದ ಒಪ್ಪಿಗೆ ಇಲ್ಲದೆ ಬ್ಯಾಂಕಿನವರು ಹಣ ವರ್ಗಾವಣೆ ಮಾಡಿರುವುದು ಸೇವಾ ನ್ಯೂನತೆ ಎಂದು ಈ ಹಿಂದೆ ಗ್ರಾಹಕ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಸರಿಪಡಿಸಲು ದಂಡ ಸಹಿತ ಆದೇಶವಾಗಿತ್ತು. ಈ ನಡುವೆ ರಮೇಶ್ ಅವರ ಕುಟುಂಬದವರ ಅನುಮತಿ ಇಲ್ಲದೆ ಬ್ಯಾಂಕಿನವರು ಪುನಃ ಹಣ ವರ್ಗಾವಣೆ ಮಾಡಿದ್ದರು. ಪರಿಶೀಲನೆ ನಡೆಸಿದ ಗ್ರಾಹಕ ನ್ಯಾಯಾಲಯ, ಬ್ಯಾಂಕಿನ ಸೇವಾ ನ್ಯೂನತೆ ದೃಢಪಟ್ಟಿದೆ ಎಂದು ಆದೇಶಿಸಿದೆ. ಕಾನೂನು ಬಾಹಿರವಾಗಿ ವರ್ಗಾಯಿಸಿದ ಮೊತ್ತ 1.73 ಲಕ್ಷ ರೂ.ಗಳನ್ನು ಶೇ.8ರ ಬಡ್ಡಿ ಸಹಿತ ಮೃತ ರಮೇಶ್ ಅವರ ಧಾರವಾಡ ಖಾತೆಗೆ ಮರುಪಾತಿಗೆ ಸೂಚಿಸಿದೆ. ದೂರುದಾರರಿಗೆ ಉಂಟಾದ ಮಾನಸಿಕ ತೊಂದರೆಗೆ 1 ಲಕ್ಷ ರೂ. ಪರಿಹಾರ, ವ್ಯಾಜ್ಯ ವೆಚ್ಚ 5 ಸಾವಿರ ರೂ. ಗಳನ್ನು ಬ್ಯಾಂಕಿನವರು ದೂರುದಾರರಿಗೆ ಪಾವತಿಸುವಂತೆ ಸೂಚಿಸಲಾಗಿದೆ.
ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಬಿ.ಡಿ.ಯೋಗಾನಂದ ಹಾಗೂ ಮಹಿಳಾ ಸದಸ್ಯೆ ಸವಿತಾ ಬಿ ಪಟ್ಟಣಶೆಟ್ಟಿ ಇವರ ಪೀಠವು ಈ ಆದೇಶ ನೀಡಿದೆ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.