SHIVAMOGGA LIVE NEWS | 14 SEPTEMBER 2023
SAGARA : ರೈಲ್ವೆಯ ಒಹೆಚ್ಇ ತಾಮ್ರದ ತಂತಿ ಕಳ್ಳತನ ಮಾಡಿದ್ದ ಆರೋಪಿಗಳು ಮತ್ತು ಅದನ್ನು ಖರೀದಿಸಿದ್ದ ವ್ಯಾಪಾರಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇವರಿಂದ 2 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ ವಶಕ್ಕೆ ಪಡೆಯಲಾಗಿದೆ ಎಂದು ರೈಲೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸೆ.6ರ ರಾತ್ರಿ ಸಾಗರ ಮತ್ತು ಆನಂದಪುರ ಮಧ್ಯೆ ರೈಲ್ವೆ ವಿದ್ಯುದೀಕರಣದ ತಾಮ್ರದ ತಂತಿ ತುಂಡಾಗಿ ಹಳಿ ಮೇಲೆ ಬಿದ್ದಿತ್ತು. ಸೆ.7ರಂದು ಬೆಳಗ್ಗೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್ಸಿಟಿ ರೈಲಿನ ಇಂಜಿನ್ಗೆ ತಂತಿ ತಗುಲಿತ್ತು. ತಂತಿ ತೆರವುಗೊಳಿಸಿ ತಾಂತ್ರಿಕ ಸಮಸ್ಯೆ ಪರಿಹಾರಿಸಲಾಗಿತ್ತು. ಇದರಿಂದ ರೈಲು ಎರಡು ಗಂಟೆಗೂ ಹೆಚ್ಚು ಕಾಲ ತಡವಾಗಿ ಸಂಚರಿಸಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ಮಾತ್ರ ವರದಿ ಪ್ರಕಟಿಸಿತ್ತು. ವರದಿ ಓದಲು – ಸಾಗರ – ಶಿವಮೊಗ್ಗ ಮಧ್ಯೆ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ
ತಂತಿ ತುಂಡಾಗಲು ಕಳ್ಳರು ಕಾರಣ
ರೈಲ್ವೆ ವಿದ್ಯುತ್ ಲೇನ್ಗೆ ಬಳಸಿದ್ದ ತಾಮ್ರದ ತಂತಿ ತನ್ನಿಂತಾನೆ ತುಂಡಾಗಿ ಬಿದ್ದಿಲ್ಲ ಅನ್ನುವುದು ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೆ ಅಧಿಕಾರಿಗಳ ಅರಿವಿಗೆ ಬಂದಿತ್ತು. ಈ ಹಿನ್ನೆಲೆ ತನಿಖೆ ನಡೆಸಲಾಯಿತು. ರೈಲ್ವೆ ಪೊಲೀಸ್ ಫೋರ್ಸ್ (ಆರ್ಪಿಎಫ್) ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಸುಳಿವು ನೀಡಿತ್ತು. ಇನ್ನು, ಮೊಬೈಲ್ ನೆಟ್ವರ್ಕ್ ಪರಿಶೀಲನೆ ಸೇರಿದಂತೆ ವಿವಿಧ ಬಗೆಯಲ್ಲಿ ತನಿಖೆ ಕೈಗೊಂಡ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕದ್ದವರಷ್ಟೆ ಅಲ್ಲ ಕೊಂಡವರೂ ಅರೆಸ್ಟ್
260 ಮೀಟರ್ ಒಹೆಚ್ಇ ತಾಮ್ರದ ತಂತಿ ಕಳ್ಳತನ ಮಾಡಿದ್ದ ಆರೋಪ ಸಂಬಂಧ ಕುಂಸಿಯ ನೂರುಲ್ಲಾ ಮತ್ತು ಮಂಜು ಎಂಬುವವರನ್ನು ರೈಲ್ವೆ ಪೊಲೀಸರು ಬಂಧಿಸಿ ವಿಚಾರಣೆ ನಡಸಿದರು. ಈ ವೇಳೆ ಒಹೆಚ್ಇ ತಂತಿಯನ್ನು ಶಿವಮೊಗ್ಗದಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ತಾಮ್ರದ ತಂತಿಯನ್ನು ಖರೀದಿಸಿದ್ದ ಶಿವಮೊಗ್ಗದ ನಾರಾಯಣ ಮತ್ತು ಜ್ಞಾನೇಶ್ವರ್ ಎಂಬುವವರು ಬಂಧಿಸಲಾಗಿದೆ. 2 ಲಕ್ಷ ರೂ.ಮೌಲ್ಯದ ತಾಮ್ರತ ತಂತಿ, ಒಂದು ದ್ವಿಚಕ್ರ ವಾಹನ, ಕಟರ್, ಲ್ಯಾಡರ್ ಟ್ರಾಲಿ, ರೈಲ್ವೆ ವಿದ್ಯುದೀಕರಣ ಉಪಕರಣ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ರೈಲ್ವೆಯ ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ.ನಿಶಾದ್, ಶಿವಮೊಗ್ಗ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎನ್.ಕುಬೇರಪ್ಪ ತಂಡದ ನೇತೃತ್ವ ವಹಿಸಿದ್ದರು. ಸಬ್ ಇನ್ಸ್ಪೆಕ್ಟರ್ಗಳಾದ ಸಂತೋಷ್ ಗಾಂಕರ್, ಜ್ಯೋತಿ ಸ್ವರೂಪ್, ಎಎಸ್ಐಗಳಾದ ಎಂ.ಪಿ.ತಮ್ಮಯ್ಯ, ಅನ್ವರ್ ಸಾದಿಕ್, ಬಿ.ಆನಂದ್, ವಿ.ಸುರೇಶ್, ಶರಣಪ್ಪ, ಹೆಡ್ ಕಾನ್ಸ್ಟೇಬಲ್ಗಳಾದ ಎಚ್.ಆರ್.ರಮೇಶ್, ಸಿ.ಎ.ಕುಮಾರ್, ಡಿ.ಚೇತನ್, ಫಯಾಜ್ ಅಹ್ಮದ್, ವಿ.ಕುಮಾರ್ ಮತ್ತು ಕಾನ್ಸ್ಟೇಬಲ್ಗಳಾದ ಪ್ರವೀಣ್ ಕುಮಾರ್, ಪರಮೇಶ್ವರಪ್ಪ, ಏಳಂಗೋವನ್ ಈರೇಶಪ್ಪ, ಎಂ.ಪ್ರಕಾಶ್ ಮತ್ತು ರಾಘವೇಂದ್ರ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200