ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 21 ಅಕ್ಟೋಬರ್ 2020
ಸಾಗರ ತಾಲೂಕು ಇಕ್ಕೇರಿ ಸಮೀಪದ ಕುನ್ನಿಕೋಡ್ಲು ಗ್ರಾಮದಲ್ಲಿ ತಾಯಿ ಮತ್ತು ಮಗನ ಹತ್ಯೆ ಪ್ರಕರಣಕ್ಕೆ ಪ್ರಮುಖ ಕಾರಣ ಒಂದು ವಿಡಿಯೋ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ.
ಯಾವುದದು ವಿಡಿಯೋ?
ಕೊಲೆಯಾದ ಪ್ರವೀಣ್ ತನ್ನ ಪಕ್ಕದ ಮನೆಯ ಶ್ರುತಿ ಎಂಬ ಯುವತಿಯ ಕೆಲವು ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಶ್ರುತಿ ತನ್ನ ಪ್ರಿಯಕರ ಭರತ್ ಗೌಡನಿಗೆ ವಿಚಾರ ತಿಳಿಸಿದ್ದಳು. ಹಾಗಾಗಿ ಪ್ರವೀಣ್ ಹತ್ಯೆಗೆ ಭರತ್ ಗೌಡ ಪ್ಲಾನ್ ಸಿದ್ಧಪಡಿಸಿದ್ದ ಎಂದು ತಿಳಿದು ಬಂದಿದೆ.
ಭರತ್, ಶ್ರುತಿ ಪರಿಚಯ ಹೇಗೆ?
ಭರತ್ ಗೌಡ ಮೂಲತಃ ಬೆಂಗಳೂರಿನವನು. ಅಲ್ಲಿಯ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶ್ರುತಿ ಕೆಲ ಸಮಯ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಭರತ್ ಗೌಡನ ಪರಿಚಯವಾಗಿತ್ತು. ಇದು ಕೊನೆಗೆ ಪ್ರೀತಿಯಾಗಿತ್ತು. ಕೆಲಸ ಬಿಟ್ಟು ಸಾಗರಕ್ಕೆ ಮರಳಿದ ಬಳಿಕವು ಶ್ರುತಿ, ಭರತ್ ಜೊತೆಗೆ ಸಂಪರ್ಕದಲ್ಲಿದ್ದಳು. ಈ ವೇಳೆ ಪ್ರವೀಣ್ ತನ್ನ ವಿಡಿಯೋಗಳನ್ನು ಬಳಸಿ ಬ್ಲಾಕ್ ಮೇಲ್ ಮಾಡುತ್ತಿರುವುದನ್ನು ತಿಳಿಸಿದ್ದಳು ಎಂದು ಪೊಲೀಸ್ ಮೂಲಗಳು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿವೆ.
ಪೆಪ್ಪರ್ ಸ್ಪ್ರೇ ಮಾಡಿ ಕೊಲೆ
ಬೆಂಗಳೂರಿನಿಂದ ಬರುವಾಗ ಭರತ್ ಗೌಡ ಪೆಪ್ಪರ್ ಸ್ಪ್ರೇ ತಂದಿದ್ದ. ಅಕ್ಟೋಬರ್ 11ರಂದು ಪ್ರವೀಣ್ ಅವರ ಮನೆಯೊಳಗೆ ನುಗ್ಗಿದ ಭರತ್ ಗೌಡ, ಪೆಪ್ಪರ್ ಸ್ಪ್ರೇ ಬಳಸಿದ್ದಾನೆ. ಪ್ರವೀಣ್‍ಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪ್ರವೀಣ್ ಅವರ ತಾಯಿ ಅಡ್ಡ ಬಂದಿದ್ದಾರೆ. ಅವರಿಗೂ ಭರತ್ ಚಾಕುವಿನಿಂದ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರವೀಣ್ ಪತ್ನಿಯೆ ಪ್ರಮುಖ ಸಾಕ್ಷಿ
ಕೊಲೆಗೆ ಪ್ರವೀಣ್ ಅವರ ಪತ್ನಿಯೆ ಪ್ರಮುಖ ಸಾಕ್ಷಿ. ಅವರು ನೀಡಿದ ಮಾಹಿತಿ ಅಧಾರದ ಮೇಲೆ ಪೊಲೀಸರು ತನಿಖೆ ನಡೆಸಿದರು. ಬೆಂಗಳೂರಿನ ಪೀಣ್ಯದಲ್ಲಿ ಭರತ್ ಗೌಡನನ್ನು ಬಂಧಿಸಿ ಕರೆ ತರಲಾಗಿತ್ತು. ಆದರೆ ಸ್ಥಳ ಮಹಜರ್ ಮಾಡಿ ಹಿಂತಿರುಗುವ ವೇಳೆ ಭರತ್ ಗೌಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಹಾರಿಸಿದ ಗುಂಡು, ಭರತನ ಕಾಲಿಗೆ ಹೊಕ್ಕಿದೆ.
ಎರಡನೆ ಆರೋಪಿ ಶ್ರುತಿ
ಜೋಡಿ ಕೊಲೆ ಪ್ರಕರಣದಲ್ಲಿ ಶ್ರುತಿಯನ್ನು ಎರಡನೇ ಆರೋಪಿಯಾಗಿದ್ದಾಳೆ. ಪ್ರವೀಣ್ ಕೊಲೆಗೆ ಭರತ್ ಜೊತೆ ಸೇರಿ ಸಂಚು ರೂಪಿಸಿದ ಆರೋಪ ಆಕೆ ವಿರುದ್ಧವಿದೆ. ಆರೋಪಿ ಶ್ರುತಿಯನ್ನು ಬಂಧಿಸಲಾಗಿದೆ.
ಸಾಗರದ ಡಿವೈಎಸ್‍ಪಿ ವಿನಾಯಕ ಶೆಟಿಗಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ಅಪರಾಧ ತನಿಖಾ ದಳದ ಇನ್ಸ್ ಪೆಕ್ಟರ್ ಕುಮಾರಸ್ವಾಮಿ, ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅಭಯಪ್ರಕಾಶ್ ಸೋಮನಾಳ್, ವಿನೋಬನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಉಮೇಶ್, ಸಾಗರ ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422