ಶಿವಮೊಗ್ಗ ಲೈವ್.ಕಾಂ | SHIMOGA | 06 ಡಿಸೆಂಬರ್ 2019
ಬಿದರೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಹುಂಡಿಗಳನ್ನು ಒಡೆದು ಕಾಣಿಕೆ ಹಣ ಕಳ್ಳತನ ಮಾಡಿದ್ದ ತಂಡವನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರದಿಂದ ಪಿಸ್ತೂಲ್, ಒಂಭತ್ತು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ನವೆಂಬರ್ 25ರಂದು ಸೆಕ್ಯೂರಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಬಾಗಿಲು ಒಡೆದು ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು, ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಯಾರನ್ನೆಲ್ಲ ಬಂಧಿಸಲಾಗಿದೆ?
ಕಳ್ಳರ ಗ್ಯಾಂಗ್ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿತ್ತು. ತನಿಖೆ ವೇಳೆ ಮಂಗಳೂರಿನ ಬಂಟ್ವಾಳ ಮೂಲದ ಮೊಹಮದ್ ಗೌಸ್ (34) ಎಂಬಾತನನ್ನು ಅರೆಸ್ಟ್ ಮಾಡಲಾಯಿತು. ಈತನ ವಿಚಾರಣೆ ನಡೆಸಿದ ಪೊಲೀಸರು, ಇವತ್ತು ಬೆಳೆಗ್ಗೆ ಸಂತೆ ಕಡೂರು ಬಳಿ ಉಳಿದ ಮೂವರನ್ನು ಅರೆಸ್ಟ್ ಮಾಡಲಾಯಿತು. ಉಡುಪಿಯ ಪ್ರೇಮನಾಥ (18), ಮೂಡುಬಿದರೆಯ ತೌಸೀಫ್ ಅಹಮದ್ (30), ಕಡೂರಿನ ತಿಮ್ಮಯ್ಯ (58) ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.

ಕಳ್ಳರ ಬಳಿಯಿತ್ತು ಗನ್
ಕಳ್ಳರ ಗ್ಯಾಂಗ್ ಬಳಿ ಒಂದು ಪಿಸ್ತೂಲು ಮತ್ತು ಒಂಭತ್ತು ಜೀವಂತ ಗುಂಡು ಪತ್ತೆಯಾಗಿದೆ. ‘ಪಿಸ್ತೂಲು ಮತ್ತು ಬುಲೆಟ್ ಕುರಿತು ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನು, ಕಳ್ಳತನಕ್ಕೆ ಬಳಸಿದ್ದ XUV ಕಾರು, 24,500 ರೂ. ನಗದು, ಕೃತ್ಯಕ್ಕೆ ಬಳಸಿದ್ದ ರೇನ್ ಕೋಟ್, ಜರ್ಕಿನ್, ಮಂಕಿಕ್ಯಾಪ್, ಕಬ್ಬಿಣದ ರಾಡ್, ಆಕ್ಸೆಲ್ ಬ್ಲೇಡ್, ಸ್ಕ್ರೂ ಡ್ರೈವರ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳರ ಹಿಡಿದ ಪೊಲೀಸರಿಗೆ ಬಹುಮಾನ
ಇನ್ನು, ಈ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿದ ಪೊಲೀಸರಿಗೆ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಅವರು 20 ಸಾವಿರ ರೂ. ನಗದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಚೆಕ್ ನೀಡಿದರು. ಡಿವೈಎಸ್’ಪಿ ಉಮೇಶ್ ನಾಯ್ಕ, ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಲೋಕೇಶ್, ಪಿಎಸ್ಐ ಮಂಜು ಎಸ್.ಕುಪ್ಪೆಲೂರು ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga Rural Police Arrest four thieves who broke the door of Bidare Sri Shiradi Sai Baba Mandira. Police recovered a pistol and nine rounds of bullet. An XUV has been seized.