SHIVAMOGGA LIVE NEWS | 22 MARCH 2024
SHIMOGA : ಆನ್ಲೈನ್ನಲ್ಲಿ ಕೆಲಸ ಎಂದು ನಂಬಿಸಿ ಶಿಕ್ಷಕಿಯೊಬ್ಬರಿಗೆ 14 ಲಕ್ಷ ರೂ. ವಂಚಿಸಲಾಗಿದೆ. ಶಿಕ್ಷಕಿಯೊಬ್ಬರ (ಹೆಸರು ಗೌಪ್ಯ) ವಾಟ್ಸಪ್ಗೆ ಆನ್ಲೈನ್ ಕೆಲಸದ ಮೆಸೇಜ್ ಮಾಡಿ, ಸಂಸ್ಥೆಯೊಂದರ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲಾಗಿತ್ತು. ವಿವಿಧ ಟಾಸ್ಕ್ಗಳನ್ನು ನೀಡಲಾಗಿತ್ತು.
ಪ್ರತಿ ಟಾಸ್ಕ್ಗೆ ಹಣ ಪಾವತಿಸಿಕೊಂಡು ಲಾಭಾಂಶ ವರ್ಗಾಯಿಸಲಾಗಿತ್ತು. ಆನಂತರ ಶಿಕ್ಷಕಿಯ ಗಮನಕ್ಕೆ ಬಾರದೆ ಆಕೆಯ ಪತಿಯ ಬ್ಯಾಂಕ್ ಖಾತೆಯಿಂದ 13.93 ಲಕ್ಷ ರೂ., ಶಿಕ್ಷಕಿಯ ಖಾತೆಯಿಂದ 10 ಸಾವಿರ ರೂ. ಹಣ ವರ್ಗಾಯಿಸಿಕೊಳ್ಳಲಾಗಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ವೈದ್ಯ ಮೋಹನ್ ನಿಧನ, ಸ್ವಗೃಹದಲ್ಲಿ ಅಂತಿಮ ದರ್ಶನ