SHIVAMOGGA LIVE NEWS | 30 MARCH 2024
SAGARA : ಸ್ನೇಹಿತ ನೀಡಿದ ಹಣವನ್ನು ಮನೆಗೆ ಕೊಂಡೊಯ್ದು ಎಣಿಸುವಾಗ ನಕಲಿ ನೋಟುಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸ್ನೇಹಿತನ ವಿರುದ್ಧ ವ್ಯಕ್ತಿಯೊಬ್ಬ ಸಾಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೋಜ್ ಎಂಬುವವರು ತಮ್ಮ ಸ್ನೇಹಿತನೊಬ್ಬನಿಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 30 ಸಾವಿರ ರೂ. ಹಣ ನೀಡಿದ್ದರು. ಈಚೆಗೆ ಹಣ ಮರಳಿಸುವಂತೆ ಕೇಳಿದಾಗ ಸ್ನೇಹಿತ 500 ರೂ. ಮುಖಬೆಲೆಯ 60 ನೋಟುಗಳನ್ನು ಮರಳಿಸಿದ್ದ. ಮನೋಜ್ ಆ ಹಣವನ್ನು ಮನೆಗೆ ಕೊಂಡೊಯ್ದು ಎಣಿಸುವಾಗ ನೋಟಿನ ಗುಣಮಟ್ಟದ ಕುರಿತು ಅನುಮಾನ ಮೂಡಿದೆ. ಸೀರಿಯಲ್ ನಂಬರ್ ಪರಿಶೀಲಿಸಿದಾಗ ಒಂದೇ ನಮೂನೆಯ ನಂಬರ್ಗಳಿದ್ದವು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಸ್ನೇಹಿತನ ವಿರುದ್ಧ ಮನೋಜ್ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ದೇಗುಲದ ಬಾಗಿಲ ಬಳಿ ಬಂದು ನಿಂತಿದ್ದ ಮಹಿಳೆಗೆ ಕಾದಿತ್ತು ಶಾಕ್