ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 27 DECEMBER 2023
BHADRAVATHI : ಜಮೀನಿನಲ್ಲಿ ಚಿನ್ನದ ನಾಣ್ಯ ಸಿಕ್ಕಿದೆ ಎಂದು ನಂಬಿಸಿ ಕೊಡುಗು ಜಿಲ್ಲೆಯ ವಿರಾಜಪೇಟೆಯ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸಿದ್ದಾಪುರ ಬಳಿ ಹಣ ಪಡೆದು ಮೋಸ ಮಾಡಲಾಗಿದೆ.
ಫೋನ್‌ನಲ್ಲಿ ನಡೆಯಿತು ಚರ್ಚೆ
ಭದ್ರಾವತಿಯ ರಾಜು ಎಂಬಾತ ಶಶಿಕುಮಾರ್‌ಗೆ ಕರೆ ಮಾಡಿ ಜಮೀನಿನಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ನಂಬಿಸಿದ್ದ. ನ.21ರಂದು ಶಶಿಕುಮಾರ್‌ಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿದ್ದ. ಪರಿಶೀಲಿಸಿದಾಗ ಅವು ಅಸಲಿ ಚಿನ್ನ ಎಂದು ಗೊತ್ತಾಗಿತ್ತು. ಈ ಹಿನ್ನೆಲೆ ಉಳಿದ ಚಿನ್ನದ ನಾಣ್ಯಗಳನ್ನು ಖರೀದಿಸುವಂತೆ ರಾಜು ಆಸೆ ಮೂಡಿಸಿದ್ದ. 10 ಲಕ್ಷ ರೂ. ನೀಡಿದರೆ ಎಲ್ಲ ಚಿನ್ನದ ನಾಣ್ಯಗಳನ್ನು ನೀಡುವುದಾಗಿಯು ನಂಬಿಸಿದ್ದ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾಯಿ ಮೇಲೆ ಗುಂಡಿನ ದಾಳಿ, CCTVಯಲ್ಲಿ ದೃಶ್ಯ ಸೆರೆ, ಒಬ್ಬನ ವಿರುದ್ಧ ಕೇಸ್, ಏನಿದು ಪ್ರಕರಣ?
10 ಲಕ್ಷ ಪಡೆದು ನಾಟ್ ರೀಚಬಲ್
ಭದ್ರಾವತಿ ಬೈಪಾಸ್ ರಸ್ತೆಯ ಸಿದ್ದಾಪುರದ ಬಳಿ ಶಶಿಕುಮಾರ್‌ನನ್ನು ಕರೆಯಿಸಿಕೊಂಡು 10 ಲಕ್ಷ ರೂ. ಹಣ ಪಡೆದು ನಾಣ್ಯಗಳನ್ನು ನೀಡಿ ರಾಜು ತಕ್ಷಣ ಸ್ಥಳದಿಂದ ತೆರಳಿದ್ದ. ಅನುಮಾನಗೊಂಡು ಕರೆ ಮಾಡಿದಾಗ ಆತನ ಮೊಬೈಲ್ ನಾಟ್ ರೀಚಬಲ್ ಆಗಿತ್ತು. ಮನೆಗೆ ತೆರಳಿದ ಶಶಿಕುಮಾರ್ ನಾಣ್ಯಗಳನ್ನು ಪರಿಶೀಲಿಸಿದ್ದು, ಅವು ನಕಲಿ ಎಂದು ಗೊತ್ತಾಗಿತ್ತು. ಈ ಹಿನ್ನೆಲೆ ಶಶಿಕುಮಾರ್ ದೂರು ನೀಡಲು ಮುಂದಾದಾಗ ರಾಜು ಎಂಬಾತ ಪುನಃ ಕರೆ ಮಾಡಿದ್ದ. ದೂರು ನೀಡದಂತೆ ಮನವಿ ಮಾಡಿದ್ದ. 10 ಲಕ್ಷ ರೂ. ಪೈಕಿ 5 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿಸಿದ್ದ. ಆ ನಂತರ ಹಣ ಕೇಳಿದಾಗಲೆಲ್ಲ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಬೇಸತ್ತು ಶಶಿಕುಮಾರ್ ಅವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


