ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA , 28 AUGUST 2024 : ಸಿಟಿ ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಬಂಗಾರದ (Gold) ಕಿವಿಯೋಲೆ ಕಳವು ಮಾಡಲಾಗಿದೆ. ನಗರದ ಶಿವಪ್ಪನಾಯಕ ಸರ್ಕಲ್ ಬಳಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮಾರ್ಗರೇಟ್ ಎಂಬುವವರಿಗೆ ಸೇರಿದ 23 ಸಾವಿರ ರೂ. ಮೌಲ್ಯದ 3 ಗ್ರಾಂ ತೂಕದ ಕಿವಿಯೋಲೆ ಕಳ್ಳತನವಾಗಿದೆ.
ಮಾರ್ಗರೇಟ್ ಅವರು ನೆಹರು ರಸ್ತೆಯ ಧನಲಕ್ಷ್ಮಿ ಜ್ಯುವೆಲರಿ ಶಾಪ್ನಲ್ಲಿ ಕಿವಿಯೋಲೆ ಖರೀದಿಸಿದ್ದರು. ಶಿವಪ್ಪನಾಯಕ ಸರ್ಕಲ್ವರೆಗೆ ನಡೆದು ಬಂದು ಗೋಪಾಳಕ್ಕೆ ತೆರಳುವ ಸಿಟಿ ಬಸ್ ಹತ್ತಿದ್ದರು. ಈ ವೇಳೆ ರಶ್ ಇದ್ದಿದ್ದರಿಂದ ಕಳ್ಳರು ಮಾರ್ಗರೇಟ್ ಅವರ ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು, ಕಿವಿಯೋಲೆ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.» ಕಳ್ಳತನ ಆಗಿದ್ದು ಹೇಗೆ?
ಬಸ್ಸಿನಲ್ಲಿ ಟಿಕೆಟ್ ಹಣಕ್ಕಾಗಿ ವ್ಯಾನಿಟಿ ಬ್ಯಾಗ್ ತೆಗೆಯಲು ಮುಂದಾದಾಗ ಜಿಪ್ ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಕಿವಿಯೋಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ಭದ್ರಾವತಿ ನಗರಸಭೆಗೆ ನೂತನ ಉಪಾಧ್ಯಕ್ಷ, ಕುತೂಹಲ ಮೂಡಿಸಿದ ಮೂವರು ಬಿಜೆಪಿ ಸದಸ್ಯರ ನಡೆ