SHIVAMOGGA LIVE NEWS | 20 MARCH 2024
SHIMOGA : ಹರಿಗೆಯಲ್ಲಿ ವ್ಯಕ್ತಿಯೊಬ್ಬನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ?
ಬಾರ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತನ ಮೇಲೆ ಹರಿಗೆಯ ತೊಪ್ಪನಘಟ್ಟ ಕ್ರಾಸ್ ಬಳಿ ಮಚ್ಚಿನಿಂದ ದಾಳಿ ನಡೆಸಲಾಗಿತ್ತು. ಪ್ರಶಾಂತ್ ತಲೆಯಲ್ಲಿ ಮಚ್ಚು ಸಿಕ್ಕಿಕೊಂಡಿತ್ತು. ಸ್ಥಳೀಯರು ಮಚ್ಚು ಸಹಿತ ಪ್ರಶಾಂತ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಕಿತ್ಸೆಗಾಗಿ ಪ್ರಶಾಂತ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಶಾಂತ್ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪರಿಚಿತರಿಂದಲೆ ನಡೆಯಿತು ದಾಳಿ
ಪ್ರಶಾಂತ್ ಮೇಲೆ ದಾಳಿ ನಡೆಸಿದವರು ಆತನ ಪರಿಚಿತರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಿದ್ಯಾನಗರದ ಆಶೋಕ್, ತೇಜಸ್, ಪವನ್, ಅವಿನಾಶ್, ಅಮಿತ್, ದರ್ಶನ್ ಎಂಬುವವರನ್ನು ಬಂಧಿಸಿದ್ದಾರೆ. ಎಲ್ಲರು 20 ರಿಂದ 23 ವರ್ಷದವರು. ಪ್ರಶಾಂತ್ ಜೊತೆಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಯಾರೂ ಇಲ್ಲದಾಗ ಮನೆಯಲ್ಲಿ ಕಾಣಿಸಿತು ಹೊಗೆ, ಬೆಂಕಿ ನಂದಿಸಿ ಒಳ ಹೋದ ಮಾಲೀಕರಿಗೆ ಕಾದಿತ್ತು ಶಾಕ್