ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಎದುರಿನಿಂದ ಬಂದ ಬೈಕ್ಗೆ ಕಾರು ಡಿಕ್ಕಿ, ಚಾಲಕ ಎಸ್ಕೇಪ್
SHIMOGA : ಓವರ್ ಟೇಕ್ ವೇಳೆ ಎದುರಿನಿಂದ ಬಂದ ಬೈಕ್ಗೆ ಕಾರು ಡಿಕ್ಕಿಯಾಗಿದೆ. ಬೈಕ್ ಸವಾರ ಕೃಷಿ ನಗರದ ಸುರೇಶ್ ಕುಮಾರ್ ಎಂಬುವವರಿಗೆ ಗಾಯವಾಗಿದೆ. ಶಿವಮೊಗ್ಗ ತಾಲೂಕು ಅರಳಿಹಳ್ಳಿ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಸವಳಂಗ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಅರಳಿಹಳ್ಳಿ ಬಳಿ ಬೈಕ್ ಒಂದನ್ನು ಓವರ್ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಮತ್ತು ಬೈಕ್ನು ಮುಂಭಾಗ ಜಖಂ ಆಗಿದೆ. ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು
SORABA : ತಾಲೂಕಿನ ಮಾವಲಿ ಗ್ರಾಮದಲ್ಲಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಭಾನುವಾರ ಕಳವು ಮಾಡಲಾಗಿದೆ. ಗ್ರಾಮದ ಶಿಕ್ಷಕ ಈಶ್ವರಪ್ಪ ಅವರ ಮನೆಯಲ್ಲಿದ್ದ 10 ಚೀಲ ಸಿಪ್ಪೆಗೋಟು ಅಡಿಕೆ, ಹಾಗೆಯೇ ಚೆನ್ನಬಸಪ್ಪಗೌಡ ಅವರ ಮನೆಯಲ್ಲಿ ಸಂಗ್ರಹಿಸಿಟ್ಟ 8 ಚೀಲ ಸಿಪ್ಪೆಗೋಟು ಅಡಿಕೆ ಕಳವಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಓಮ್ನಿಯಲ್ಲಿ 350 ಲೀಟರ್ ಡಿಸೇಲ್ ಪತ್ತೆ, ವಶಕ್ಕೆ
AGUMBE : ಹೆಬ್ರಿ ಕಡೆಯಿಂದ ಓಮ್ಮಿಯಲ್ಲಿ ಸಾಗಿಸುತ್ತಿದ್ದ 30 ಸಾವಿರ ರೂ. ಮೊತ್ತದ 350 ಲೀಟರ್ ಡೀಸೆಲ್ ತುಂಬಿದ್ದ 12 ಆಯಿಲ್ ಕ್ಯಾನ್, ಓಮ್ಮಿಯನ್ನು ಆಗುಂಬೆ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಭಾನುವಾರ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ವಾಹನ ತಡೆದು ತಪಾಸಣೆ ನಡೆಸಿದಾಗ ಡೀಸೆಲ್ ಪತ್ತೆಯಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ ಅಪರಿಚಿತ ಸಾವು
TARIKERE : ತರೀಕೆರೆ ತಾಲೂಕು ಶಿವಪುರ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. 40ರಿಂದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಶಿವಮೊಗ್ಗ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಮಲಗಿದ್ದಲ್ಲೆ ವ್ಯಕ್ತಿ ಸಾವು
SHIMOGA : ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಗೃಹದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. 50ರಿಂದ 55 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ – ಧಗಧಗ ಹೊತ್ತಿ ಉರಿದವು ವಸ್ತುಗಳು, ಬೆಂಕಿ ನಂದಿಸಿ ಮನೆ ಒಳಗೆ ಪರಿಶೀಲಿಸಿದಾಗ ಮಾಲೀಕನಿಗೆ ಕಾದಿತ್ತು ಆಘಾತ