ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 30 MAY 2024
BHADRAVATHI : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಲಾಕ್ (Lock) ಮುರಿದು ಕಳ್ಳತನ ಮಾಡಲಾಗಿದೆ. ಕುಟುಂಬದವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಹುಬ್ಬಳ್ಳಿಯಿಂದ ಭದ್ರಾವತಿಯ ಹೊಸಮನೆ ಬಡಾವಣೆಯ ಕೇಶವಾಪುರಕ್ಕೆ ಮರಳಿದಾಗ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಹೊಳೆಹೊನ್ನೂರು ಬಳಿ ತುಂಗಭದ್ರ ನದಿ ದಂಡೆ ಮೇಲೆ ಅಧಿಕಾರಿಗಳು, ಪೊಲೀಸರಿಂದ ದಾಳಿ
ಶಕೀಲ್ ಅಹಮದ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮೇ 18ರಂದು ಕುಟುಂಬದವರು ಹುಬ್ಬಳ್ಳಿಗೆ ತೆರಳಿದ್ದರು. ಮೇ 27ರಂದು ಮನೆಗೆ ಮರಳಿದಾಗ ಮುಂದಿನ ಬಾಗಿಲು ತೆರೆದಂತ್ತಿತ್ತು. ಒಳ ಹೋಗಿ ನೋಡಿದಾಗ ವಸ್ತುಗಳ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೀರುವಿನಲ್ಲಿದ್ದ 99 ಸಾವಿರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






