SHIVAMOGGA LIVE NEWS | 2 ಮಾರ್ಚ್ 2022
ಮನೆ ಬಾಗಲಿಗೆ ಹಾಕಿದ್ದ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಚಿನ್ನಾಭರಣ, ನಗದು ಮತ್ತು ನಿವೇಶನದ ಮೂಲಕ ದಾಖಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತಾಲೂಕು ಹುರುಳಿಹಳ್ಳಿ ಗ್ರಾಮದ ಶಿವರಾಜ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಶಿವರಾಜ ಅವರ ತಾಯಿ ಕೆಲಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಮನೆಗೆ ಬಂದಾಗ ಬಾಗಿಲು ಬೀಗ ಮುರಿದಿರುವುದು ಗೊತ್ತಾಗಿದೆ. ರೂಂನ ಬೀರುವಿನಲ್ಲಿದ್ದ 25 ಸಾವಿರ ಮೌಲ್ಯದ 3 ಉಂಗುರ, 80 ಸಾವಿರ ರೂ. ನಗದು, ಖಾಲಿ ನಿವೇಶನದ ಮೂಲ ಪ್ರತಿಯನ್ನು ಕಳವು ಮಾಡಲಾಗಿದೆ.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.