SHIVAMOGGA LIVE NEWS | 16 MARCH 2023
SHIMOGA : ಗೂಗಲ್ ನಲ್ಲಿ HOW TO EARN MONEY ಎಂದು ಸರ್ಚ್ ಮಾಡಿದ ವೈದ್ಯರೊಬ್ಬರು ಕೊನೆಗೆ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿದ್ದ ಲಿಂಕ್ ಒಂದನ್ನು ಕ್ಲಿಕ್ ಮಾಡಿ, ವೈದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ವೈದ್ಯ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ತಮ್ಮ ಮೊಬೈಲ್ ಮೂಲಕ ಗೂಗಲ್ ನಲ್ಲಿ HOW TO EARN MONEY ಎಂದು ಸರ್ಚ್ ಮಾಡಿ, ಹಣ ಕಳೆದುಕೊಂಡಿದ್ದಾರೆ.
ಹಣ ಕಳೆದುಕೊಂಡಿದ್ದು ಹೇಗೆ?
ಹಣ ಹೂಡಿಕೆ ಮಾಡುವ ಸಂಬಂಧ ಗೂಗಲ್ ನಲ್ಲಿ HOW TO EARN MONEY ಎಂದು ವೈದ್ಯ ಸರ್ಚ್ ಮಾಡಿದ್ದಾರೆ. ಆಗ HAPPYTOEARN188.CLUB ಎಂಬ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ಸೂಚಿಸಿರುವ ಹಾಗೆ ವೈದ್ಯ ತನ್ನ ಮಾಹಿತಿ, ವಿಳಾಸ, ಮೊಬೈಲ್ ನಂಬರ್, ಬ್ಯಾಂಕ್ ವಿವರಗಳನ್ನು ದಾಖಲು ಮಾಡಿದ್ದಾರೆ.
ಇದನ್ನೂ ಓದಿ – ಥೇಟ್ ಹಂದಿ ಅಣ್ಣಿ ಮೇಲಿನ ದಾಳಿಯಂತೆಯೇ ನಡೆಯಿತು ಅಟ್ಯಾಕ್, ರಾತ್ರೋರಾತ್ರಿ ಆರೋಪಿಗಳು ಪೊಲೀಸರಿಗೆ ಸರೆಂಡರ್
ಇದಾಗಿ ಕೆಲವೆ ಹೊತ್ತಿಗೆ ವಾಟ್ಸಪ್ ಗೆ ಮೆಸೇಜ್ ಬಂದಿದೆ. ಹಣ ಹೂಡಿಕೆ ಮಾಡಿ, ಬಳಿಕ ನಿಮಗೆ ಕಮಿಷನ್ ನೀಡಲಿದ್ದೇವೆ ಎಂದು ಬರೆಯಲಾಗಿತ್ತು. ಕಂಪನಿಯವರು ಹೇಳಿದಂತೆ ವೈದ್ಯ ತನ್ನ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 2,38,299 ರೂ. ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮಾಡಿದ್ದಕ್ಕೆ ಕಂಪನಿಯವರು 30 ರೂ. ಕಮಿಷನ್ ಹಣ ವರ್ಗಾಯಿಸಿದ್ದರು.
ವೈದ್ಯ ತನ್ನ ಖಾತೆಗೆ ಬಂದಿರುವ ಕಮಿಷನ್ ಹಣ ವಿತ್ ಡ್ರಾ ಮಾಡಲು ಹೋದಾಗ ಹಣ ವರ್ಗಾವಣೆಯಾಗಿಲ್ಲ. ಇದರಿಂದ ಅನುಮಾನಗೊಂಡು ತನ್ನ ಹಣ ಹಿಂತಿರುಗಿಸುವಂತೆ ವೈದ್ಯ ತಿಳಿಸಿದ್ದಾರೆ. ಆಗ ಆ ಕಂಪನಿಯವರು ಇನ್ನೂ ಹೆಚ್ಚಿನ ಹೂಡಿಕೆ ಮಾಡುವಂತೆ ಸೂಚಿಸಿದ್ದಾರೆ. ದಿಕ್ಕು ತೋಚದಾದ ವೈದ್ಯ, ದೂರು ನೀಡಿದ್ದಾರೆ.
ಇದನ್ನೂ ಓದಿ – ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಪಿಡಿಒ ಹಲ್ಲೆ, ಶಿವಮೊಗ್ಗದಲ್ಲಿ ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಧರಣಿ
ವಂಚನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.