ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಅಕ್ಟೋಬರ್ 2021
ಹೊಸ ಬಾಡಿಗೆ ಮನೆ ತೋರಿಸುವುದಾಗಿ ನಂಬಿಸಿ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪತಿ, ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಗಾಡಿಕೊಪ್ಪದ ಬಳಿ ಶನಿವಾರ ರಾತ್ರಿ ನಡೆದ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಹತ್ಯೆಗೆ ಕಾರಣ ತಿಳಿದು ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನು ಓದಿ | ಶಿವಮೊಗ್ಗದಲ್ಲಿ ಮಾರಕಾಸ್ತ್ರಗಳಿಂದ ಪತ್ನಿಯನ್ನು ಕೊಂದ ಪತಿ
ಆಯನೂರು ಗ್ರಾಮದ ಕೌಸರ್ ಫಿಜಾ (19) ಎಂಬಾಕೆಯನ್ನು ಶಿವಮೊಗ್ಗದ ಟಿಪ್ಪು ನಗರದ ಶೋಯಬ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೆಲವು ಸಮಯ ಸಂಸಾರ ನಡೆಸಿದ ಬಳಿಕ ಕೌಸರ್ ಫಿಜಾ ತವರಿಗೆ ಹಿಂತಿರುಗಿದ್ದರು.
ಅನುಮಾನ, ಗಲಾಟೆ, ಕಿರುಕುಳದ ಆರೋಪ
ಕೌಸರ್ ಫಿಜಾಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆಯ ಮನೆಯವರು ಶೋಯಬ್’ಗೆ ಗುಜರಿ ಅಂಗಡಿ ಇಟ್ಟುಕೊಟ್ಟಿದ್ದರು. ವ್ಯಾಪಾರದಿಂದ ಬಂದ ಹಣವನ್ನೆಲ್ಲ ಶೋಯಬ್ ಖರ್ಚು ಮಾಡುತ್ತಿದ್ದ. ಆದರೆ ಭವಿಷ್ಯಕ್ಕೆ ಹಣ ಕೂಡಿಡುವಂತೆ ಕೌಸರ್ ಫಿಜಾ ಶೋಯಬ್’ಗೆ ತಿಳಿಸುತ್ತಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ಕೌಸರ್ ಫಿಜಾಳ ಬಗ್ಗೆ ಶೋಯಬ್ ಅನುಮಾನ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಕಿರುಕುಳವನ್ನು ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತವರಿಗೆ ಮರಳಿದ್ದಳು ಕೌಸರ್
ಪತಿಯ ಕಿರುಕುಳದಿಂದ ಮನನೊಂದು ಕೌಸರ್ ಫಿಜಾ ತವರಿಗೆ ಮರಳಿದ್ದಳು. ಆದರೆ ಇತ್ತೀಚೆಗೆ, ಹೊಸ ಜೀವನ ರೂಪಿಸಿಕೊಳ್ಳುವ ಕುರಿತು ಶೋಯಬ್ ಪತ್ನಿ ಕೌಸರ್ ಫಿಜಾಳಲ್ಲಿ ಆಸೆ ಮೂಡಿಸಿದ್ದ. ಬಾಡಿಗೆ ಮನೆ ನೋಡಿರುವುದಾಗಿ ಕೌಸರ್’ಗೆ ತಿಳಿಸಿದ್ದ. ಕಂಪ್ಯೂಟರ್ ಕಲಿಕೆಗಾಗಿ ಬರುತ್ತಿದ್ದ ಕೌಸರ್ ಫಿಜಾಳಿಗೆ, ಹೊಸ ಬಾಡಿಗೆ ಮನೆ ತೋರಿಸುವುದಾಗಿ ನಂಬಿಸಿ ಗಾಡಿಕೊಪ್ಪ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ.
ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಯಬ್’ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.