ಅಡಕೆ ಚೇಣಿಯಿಂದ ಭಾರಿ ನಷ್ಟ, ಮನೆಯಲ್ಲಿ ನೇಣು ಬಿಗಿದುಕೊಂಡ ಗಂಡ, ಹೆಂಡತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | THIRTHAHALLI CRIME NEWS | 14 ಜನವರಿ 2022

ಅಡಕೆ ಚೇಣಿಯಿಂದ ಉಂಟಾಗಿದ್ದ ನಷ್ಟದಿಂದ ಮನನೊಂದಿದ್ದ ದಂಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ತೀರ್ಥಹಳ್ಳಿ ತಾಲೂಕಿನ ಸಂತೆಹಕ್ಲು ಸಮೀಪದ ಪೂರಲು ಕೊಪ್ಪದಲ್ಲಿ ಗುರುವಾರ ಘಟನೆ ಸಂಭವಿಸಿದೆ. ಮಂಜುನಾಥ್ (46) ಮತ್ತು ಅವರ ಪತ್ನಿ ಉಷಾ (43) ನೇಣಿಗೆ ಶರಣಾದ ದಂಪತಿ. ಅವರಿಗೆ 18 ಮತ್ತು 16 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ.

ದಂಪತಿ 1 ಎಕರೆ ಜಮೀನು ಹೊಂದಿದ್ದು, ಅಡಕೆ ಚೇಣಿ ಹಿಡಿಯಲು ಸಾಲ ಮಾಡಿದ್ದರು. ನಷ್ಟ ಅನುಭವಿಸಿ ಮನನೊಂದಿದ್ದ ಅವರು ಇದೇ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಂಜುನಾಥ್ ಗುರುವಾರ ಮುಂಜಾನೆ 5ಕ್ಕೆ ಎದ್ದು ಪತ್ನಿ ಹಾಗೂ ಅಡಕೆ ಚೇಣಿ ಕೆಲಸಕ್ಕಿದ್ದವರನ್ನು ಎಬ್ಬಿಸಿ ಹಂಡೆಗೆ ಬೆಂಕಿ ಹಾಕಿದ್ದಾರೆ. ಬಳಿಕ ಉಪ್ಪರಗೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಕೂಡ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಾರೆ.

ಮಕ್ಕಳಾದ ಅಕ್ಷಯ್ ಮತ್ತು ಆಕಾಶ್ ಈ ವೇಳೆ ಮನೆಯಲ್ಲೇ ಇದ್ದರು. ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಕಡೆ ಸಾಲ ಮಾಡಿಕೊಂಡಿದ್ದು ಕರೊನಾ ಹಿನ್ನೆಲೆಯಲ್ಲಿ ಅವರಿಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಿತ್ತು. ಇದರಿಂದ ಮನನೊಂದ ಅವರು ಮನೆಯಲ್ಲಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT ME DECEMBER REPORT

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment