ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ನಾದಿನಿಯ ಮನೆಯಿಂದ ಹಿಂತಿರುಗುಷ್ಟರಲ್ಲಿ ಮನೆ ಕಳ್ಳತನ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
SHIMOGA : ನಾದಿನಿಯ ಮನೆಗೆ ಕುಟುಂಬ ಸಹಿತ ಊಟಕ್ಕೆ ತೆರಳಿ ಮಧ್ಯರಾತ್ರಿ ವಾಪಸ್ ಬಂದಾಗ ಮನೆಯ ಇಂಟರ್‌ಲಾಕ್ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಶಿವಮೊಗ್ಗದ ಹಳೆ ಮಂಡ್ಲಿಯಲ್ಲಿ ಘಟನೆ ಸಂಭವಿಸಿದೆ. ಸಯ್ಯದ್ ಅಫ್ರೋಜ್ ಎಂಬುವವರ ಮನೆಯ ಇಂಟರ್ ಲಾಕ್ ಮುರಿದು ಬೀರುವಿನಲ್ಲಿದ್ದ 5.92 ಲಕ್ಷ ರೂ. ಮೊತ್ತದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. ಹಳೆ ಮಂಡ್ಲಿಯಲ್ಲಿನ ನಾದಿನಿಯ ಮನೆಗೆ ಸಯ್ಯದ್ ಅಫ್ರೋಜ್ ಕುಟುಂಬ ಊಟಕ್ಕೆ ತೆರಳಿತ್ತು. ರಾತ್ರಿ 11 ಗಂಟೆಗೆ ಹೋಗಿ 2 ಗಂಟೆಗೆ ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್?
ಬಾರ್ ಸಪ್ಲಯರ್‌ನನ್ನು ಅಟ್ಟಾಡಿಸಿ ಹೊಡೆದ ಯುವಕರು
SHIMOGA : ಮದ್ಯ ಕೊಡಲಿಲ್ಲ ಎಂದು ಬಾರ್ ಒಂದರ ಸಪ್ಲಯರ್ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಲಾಗಿದೆ. ಶಿವಮೊಗ್ಗದ ಬ್ಲೂ ಮೂನ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಸೆ.2ರಂದು ರಾತ್ರಿ 11.30ಕ್ಕೆ ಬಾರ್ ಕ್ಲೋಸ್ ಮಾಡುವ ಹೊತ್ತಿಗೆ ಬಂದಿದ್ದ ಯುವಕರ ಗುಂಪೊಂದು ಮದ್ಯ ಕೊಡುವಂತೆ ಕೇಳಿದ್ದಾರೆ. ಬಾರ್ ಬಂದ್ ಮಾಡಲಾಗುತ್ತಿದೆ ಎಂದು ಸಪ್ಲೆಯರ್ ಪ್ರವೀಣ್ ತಿಳಿಸಿದ್ದಾನೆ. ಈ ವೇಳೆ ಯುವಕರ ಗುಂಪು ಸಪ್ಲಯರ್ ಮೇಲೆ ಹಲ್ಲೆ ನಡೆಸಿದೆ, ಅಟ್ಟಾಡಿಸಿಕೊಂಡು ಹೋಗಿ ಹಡೆದಿದ್ದಾರೆ. ಘಟನೆ ಸಂಬಂಧ ಅರ್ಜುನ್ ಎಂಬಾತ ಮತ್ತು ಇತರೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ- ತರಕಾರಿ ಮಂಡಿಗೆ ಎಂಎಲ್‌ಎ ಭೇಟಿ | ನೊಳಂಬ ಸಮಾಜಕ್ಕೆ ನೂತನ ಅಧ್ಯಕ್ಷ – 3 ಫಟಾಫಟ್ ನ್ಯೂಸ್
ಹಣ ವಾಪಸ್ ಕೇಳಿದ್ದಕ್ಕೆ ಅಡ್ಡಗಟ್ಟಿ ಹೊಡೆದರು
SHIMOGA : ಹಣ ಮರಳಿ ಕೇಳಿದ್ದಕ್ಕೆ ಕಾರಿನಲ್ಲಿ ಬಂದ ಯುವಕರು ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಮುಖಕ್ಕೆ ಗುದ್ದಿ ಹೋಗಿದ್ದಾರೆ. ಆಸೀಲ್ ರೆಹಮಾನ್ (22) ಗಾಯಗೊಂಡಿರುವ ಕಾಲೇಜು ವಿದ್ಯಾರ್ಥಿ. ತನ್ನ ಸ್ನೇಹಿತನ ಪರಿಚಿತನೊಬ್ಬನಿಗೆ ಆಸೀಲ್ ರೆಹಮಾನ್ 5 ಸಾವಿರ ರೂ. ಹಣ ಕೊಟ್ಟಿದ್ದು, ಹಿಂತಿರುಗಿಸುವಂತೆ ಕೇಳಿದ್ದ. ಆದರೆ ಅವಾಚ್ಯವಾಗಿ ಬೈದು ಫೋನ್ ಕಟ್ ಮಾಡಿದ್ದರು. ಆಸೀಲ್ ರೆಹಮಾನ್ ಕಾಲೇಜ ಮುಗಿಸಿ ಮನೆಗೆ ಬರುವಾಗ ಕಾರಿನಲ್ಲಿ ಬಂದು ಸ್ನೇಹಿತ ಮತ್ತು ಹಣ ಪಡೆದಿದ್ದ ಯುವಕ ಅಡ್ಡಗಟ್ಟಿದ್ದಾರೆ. ಮುಷ್ಠಿ ಕಟ್ಟಿ ಮುಖಕ್ಕೆ ಗುದ್ದಿದ್ದಾರೆ. ಸ್ಥಳೀಯರು ಆಸೀಲ್‌ನನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಮೂಗಿನ ಬಳಿ ಫ್ರಾಕ್ಚರ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.