ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SORABA, 26 AUGUST 2024 : ತೋಟದಲ್ಲಿ ಅಡಿಕೆ (Areca) ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತಂದೆ ಮತ್ತು ಅಣ್ಣನ ಜತೆ ಭಾನುವಾರ ಓಟೂರು ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ ಔಷಧ ಸಿಂಪಡಿಸಲು ಹೋಗಿದ್ದರು. ತೋಟದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಸಿಂಪಡಿಸುವ ಔಷಧ ತಂತಿಗೆ ತಗುಲಿದೆ. ಔಷಧ ಸಿಂಪಡಿಸುವ ಪೈಪ್‌ನಿಂದ ವಿದ್ಯುತ್ ಪಸರಿಸಿದ ಪರಿಣಾಮ ಶ್ರೀಕಾಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲ್ಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ GOOD MORNING ಶಿವಮೊಗ್ಗ | 26 ಆಗಸ್ಟ್ 2024 | ಒಂದೇ ಕ್ಲಿಕ್‌ನಲ್ಲಿ ಜಿಲ್ಲೆಯ ಎಲ್ಲಾ ಸುದ್ದಿ