ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 MAY 2024

SHIMOGA : ಬಸ್‌ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಒಳಗೆ ಕರ್ಚೀಫ್‌ನಲ್ಲಿ ಕಟ್ಟಿಟ್ಟಿದ್ದ ಚಿನ್ನಭಾರಣ (Jewelry) ಕಳುವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಚೀಲೂರು ನಿವಾಸಿ ಫಾಸಿಹಾ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳವು ಮಾಡಲಾಗಿದೆ.

ಫಾಸಿಹಾ ಅವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಅಕ್ಕ ಮತ್ತು ತಮ್ಮನ ಪತ್ನಿ ಜೊತೆಗೆ ಮನೆಗೆ ಮರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುವಾಗ ರಶ್‌ ಇತ್ತು. ಬಸ್‌  ಹತ್ತಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ ತೆಗೆಯಲು ವ್ಯಾನಿಟಿ ಬ್ಯಾಗ್‌ನತ್ತ ಗಮನ ಹರಿಸಿದಾಗ ಜಿಪ್‌ ತೆಗೆದಿತ್ತು. ಕರ್ಚೀಫ್‌ನಲ್ಲಿ ಆಭರಣಗಳನ್ನು ಕಟ್ಟಿಟ್ಟಿದ್ದು ನಾಪತ್ತೆಯಾಗಿತ್ತು. 1.12 ಲಕ್ಷ ರೂ. ಮೌಲ್ಯದ ಆಭರಣ ಕಳ್ಳನತವಾಗಿದೆ ಎಂದು ಫಾಸಿಹಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನ ಅಗುತ್ತಿರುವುದು ಇದೇ ಮೊದಲೇನಲ್ಲ. ಪ್ರಯಾಣಿಕರ ದಟ್ಟಣೆ ಇರುವ ಸಂದರ್ಭ ನೂಕುನುಗ್ಗಲಿನಲ್ಲಿ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ, ನಗದು ಕಳವು ಮಾಡಲಾಗುತ್ತಿದೆ. ಬಸ್‌ ಹತ್ತುವ ಸಂದರ್ಭ ಮಹಿಳೆಯರು ಎಚ್ಚರ ವಹಿಸಿದರೆ ಕಳ್ಳರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ – ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಯಮನಂತೆ ಎದುರಿಗೆ ಬಂತು ಟ್ರಾಕ್ಟರ್‌, ವ್ಯಕ್ತಿ ಸಾವು

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment