SHIVAMOGGA LIVE NEWS | 19 MARCH 2024
SHIMOGA : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ. ಮನೆ ಒಳಗೆ ಬೆಂಕಿ ಹಚ್ಚಿದ್ದಾರೆ. ಇನ್ನು, ಕೃತ್ಯ ಎಸಗುವ ಮುನ್ನ ಸಿಸಿಟಿವಿಗೆ ಸ್ಟಿಕ್ಕರ್ ಅಂಟಿಸಿದ್ದು, ಡಿವಿಆರ್ ಅನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ವಿದ್ಯಾನಗರದ 13ನೇ ಅಡ್ಡರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಮನೆಯಿಂದ ಹೊಗೆ ಬರುತ್ತಿತ್ತು
ಪೂಜೆ ಇದ್ದಿದ್ದರಿಂದ ಭಾಗ್ಯಲಕ್ಷ್ಮಿ ಅವರು ತಮ್ಮ ಪತಿಯೊಂದಿಗೆ ಚನ್ನರಾಯಪಟ್ಟಣದಲ್ಲಿನ ತಮ್ಮ ಮನೆಗೆ ತೆರಳಿದ್ದರು. ಮಾ.16ರಂದು ಭಾಗ್ಯಲಕ್ಷ್ಮಿ ಅವರ ನಾದಿನಿ ಕರೆ ಮಾಡಿ, ಮನೆಯ ಒಳಗೆ ಹೊಗೆ ಬರುತ್ತಿದೆ ಎಂದು ತಿಳಿಸಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರು. ಭಾಗ್ಯಲಕ್ಷ್ಮಿ ಅವರು ಕೂಡಲೆ ಶಿವಮೊಗ್ಗಕ್ಕೆ ಮರಳಿದ್ದರು. ಪರಿಶೀಲನೆ ನಡೆಸಿದಾಗ ಮನೆಯ ಮುಂದಿನ ಬಾಗಿಲಿನ ಇಂಟರ್ಲಾಕ್ ಮುರಿದಿತ್ತು. ಬೆಡ್ ರೂಂನಲ್ಲಿದ್ದ ಹಾಸಿಗೆ, ವಾರ್ಡ್ ರೋಬ್ನಲ್ಲಿದ್ದ ಬಟ್ಟೆ ಸಂಪೂರ್ಣ ಸುಟ್ಟು ಹೋಗಿದ್ದವು.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮಾಯ
ಮತ್ತೊಂದೆಡೆ ವಾರ್ಡ್ ರೋಬ್ನಲ್ಲಿದ್ದ ಸುಮಾರು 146 ಗ್ರಾಂ ತೂಕದ ಚಿನ್ನಾಭರಣ, 3 ಕೆ.ಜಿ 800 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 19.50 ಲಕ್ಷ ರೂ. ನಗದು ಕಾಣೆಯಾಗಿತ್ತು. ಯಾರೂ ಇಲ್ಲದ ವೇಳೆ ಕಳ್ಳರು ಮನೆ ಇಂಟರ್ಲಾಕ್ ಮುರಿದು ಆಭರಣ, ನಗದು ಸೇರಿ 29.61 ಲಕ್ಷ ರೂ. ಮೌಲ್ಯದ ವಸ್ತುಗಳ ಕಳ್ಳತನ ಮಾಡಿ ಮನೆಗೆ ಬಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಭಾಗ್ಯಲಕ್ಷ್ಮಿ ದೂರು ನೀಡಿದ್ದಾರೆ.
ಸಿಸಿಟಿವಿಗೆ ಸ್ಟಿಕ್ಕರ್, ಡಿವಿಆರ್ ವಿಡಿಯೊ ಡಿಲೀಟ್
ಇನ್ನು, ಕಳ್ಳತನಕ್ಕು ಮೊದಲು ಕಳ್ಳರು ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಿಗೆ ಸ್ಟಿಕ್ಕರ್ ಅಂಟಿಸಿದ್ದರು. ಅಲ್ಲದೆ, ಮನೆಯ ಕೆಳಗಿದ್ದ ಅಂಡಿಯ ಒಳಗೆ ಇದ್ದ ಸಿಸಿಟಿವಿಯ ಡಿವಿಆರ್ನಲ್ಲಿ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ನಕಲಿ ಕೀ ಬಳಸಿ ಅಂಗಡಿಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಮೋದಿ ಕಾರ್ಯಕ್ರಮಕ್ಕೆ ಬರಲ್ಲ ಅಂದುಕೊಂಡವರು ಬಂದರು, ಬರುತ್ತಾರೆ ಅಂದುಕೊಂಡವರು ಬರಲೇ ಇಲ್ಲ