ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 DECEMBER 2022
ಶಿವಮೊಗ್ಗ : ಗಂಡ, ಹೆಂಡತಿ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ (knief assault) ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ತಾಲೂಕಿನ ಪಿಳ್ಳಂಗೆರೆ ಗ್ರಾಮದ ಸತೀಶ್ ಎಂಬುವವರ ಮೇಲೆ ಅವರ ಸಹೋದರ ಶಿವಕುಮಾರ್ ಹಲ್ಲೆ ನಡೆಸಿದ್ದಾನೆ. ಶಿವಕುಮಾರ್ ತನ್ನ ಪತ್ನಿ ಜೊತೆಗೆ ಡಿ.7ರ ರಾತ್ರಿ ಗಲಾಟೆ ಮಾಡುತ್ತಿದ್ದ. ಸತೀಶ್ ಅವರು ಗಲಾಟೆ ಬಿಡಿಸಿದ್ದಾರೆ. ಇಬ್ಬರು ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಆಗ ಶಿವಕುಮಾರ್ ಅವಾಚ್ಯವಾಗಿ ಬೈದಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮನೆಯ ಹಂಚು ತೆಗೆದು ಒಳ ನುಗ್ಗಿ 1200 ಉಂಗುರ ಕದ್ದ ಖದೀಮರು
ಸತೀಶ್ ಅವರು ಪಕ್ಕದ ಮನೆಯವರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಶಿವಕುಮಾರ್ ಚಾಕುವಿನಿಂದ ಹಲ್ಲೆ (knief assault) ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸತೀಶ್ ಅವರ ಬಲಭುಜದ ಹಿಂಭಾಗದಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಜೀವ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಿ ಸತೀಶ್ ದೂರು ನೀಡಿದ್ದಾರೆ.
ಗಾಯಗೊಂಡಿದ್ದ ಸತೀಶ್ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು


CLICK & JOIN – SHIVAMOGGA LIVE COMMUNITY



