SHIVAMOGGA LIVE NEWS | 12 AUGUST 2023
SHIMOGA : ಕ್ಷುಲಕ ವಿಚಾರಕ್ಕೆ ಬಸ್ ಚಾಲಕನೆ ಕಂಡಕ್ಟರ್ (CONDUCTOR) ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗ ಕೆಎಸ್ಆರ್ಟಿಸಿ ಡಿಪೋದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ನಿರ್ವಾಹಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾರೆ.
ಹಲ್ಲೆಗೆ ಕಾರಣವೇನು?
ನಾಗರಾಜ ನರೇಂದ್ರ ಅವರು ಜು.25ರಂದು ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದರು. ಚಾಲಕ ಪೆದ್ದಣ್ಣ, ಬಸ್ಸಿನಲ್ಲಿದ್ದ ಟ್ರೇ ಬಾಕ್ಸನ್ನು ನಿರ್ವಾಹಕನ (CONDUCTOR) ಮೇಲೆ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೆದ್ದಣ್ಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಭಾರತ – ಪಾಕ್ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್, ಸದ್ಯದಲ್ಲೇ ಬರುತ್ತೆ ಫೈಟರ್ ವಿಮಾನ, ಯಾಕೆ?
ಈ ವೇಳೆ ನಿರ್ವಾಹಕ ನಾಗರಾಜ ನರೇಂದ್ರ ಅವರು ಬಸ್ಸಿನಿಂದ ಕೆಳಗಿಳಿದಿದ್ದಾರೆ. ಆಗ ಚಾಲಕ ಪೆದ್ದಣ್ಣ ಕೆಳಗೆ ಬಂದು ನಿರ್ವಾಹಕನಿಗೆ ಹೊಡೆದು, ಕೈ ತಿರುವಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಪೋದಲ್ಲಿದ್ದ ಸಿಬ್ಬಂದಿ ಗಲಾಟೆ ಬಿಡಿಸಿ ನಿರ್ವಾಹಕ ನಾಗರಾಜ ನರೇಂದ್ರ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.