ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 01 FEBRUARY 2021
ಸಾಲದ ಹಣ ಹಿಂತಿರುಗಿಸುವುದಾಗಿ ನಂಬಸಿ ಸಾಲ ಕೊಟ್ಟವರ ಖಾತೆಯಿಂದಲೇ ಹತ್ತು ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ವಂಚನೆ?
ಬೆಂಗಳೂರಿನ ಮುರ್ತುಜಾ ಅಲಿಸ್ ಎಂಬುವವರು ಶಿವಮೊಗ್ಗದ ಫಿರೋಜ್ ಖಾನ್ ಎಂಬುವವರಿಂದ 80 ಸಾವಿರ ರೂ. ಸಾಲ ಪಡೆದಿದ್ದರು. ಹಣ ಹಿಂತಿರುಗಿಸುವಂತೆ ಫಿರೋಜ್ ಖಾನ್ ಅವರು ತಿಳಿಸಿದ್ದರು.
ಹಣ ಹಿಂತಿರುಗಿಸುವುದಾಗಿ ನಂಬಿಸಿ ಫಿರೋಜ್ ಖಾನ್ ಅವರ ಆಧಾರ್ ಕಾರ್ಡ್ ನಂಬರ್, ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್‍ಗೆ ಬಂದ ಒಟಿಪಿ ನಂಬರ್ ಪಡೆದುಕೊಂಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಫಿರೋಜ್ ಖಾನ್ ಅವರ ಖಾತೆಯಿಂದ 10 ಸಾವಿರ ರೂ. ಹಣವನ್ನು ಮುರ್ತುಜಾ ಅಲಿಸ್ ಅವರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಫಿರೋಜ್ ಖಾನ್ ಅವರು ದೂರು ನೀಡಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com


