SHIVAMOGGA LIVE|27 JUNE 2023
SORABA : ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕೇಸ್ ವರ್ಕರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದಾರೆ. 15 ಸಾವಿರ ರೂ. ಲಂಚ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಸೊರಬ ಪುರಸಭೆಯಲ್ಲಿ ದಾಳಿ ನಡೆಸಿ ಕೇಸ್ ವರ್ಕರ್ ಚಂದ್ರಕಲಾ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಏನಿದು ಪ್ರಕರಣ? ಲಂಚ ಪಡೆದಿದ್ದೇಕೆ?
ಮಂಜುನಾಥ ಎಂಬುವವರ ಸಹೋದರನ ನಿವೇಶನವು ಹಳೆ ಸೊರಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈಗ ಈ ಭಾಗವು ಸೊರಬ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಲಾಗಿತ್ತು. ಖಾತೆ ಮಾಡಿಕೊಡಲು ಹಣ ಖರ್ಚಾಗಲಿದೆ ಎಂದು ಕೇಸ್ ವರ್ಕರ್ ಚಂದ್ರಕಲಾ ಮಂಜುನಾಥ ಅವರಿಗೆ ತಿಳಿಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಫೋನ್ ಮೂಲಕ ಮಾತನಾಡಿದ್ದ ಚಂದ್ರಕಲಾ ಮೇಲಧಿಕಾರಿಗಳಿಗೆ ಕೊಡಲು ಖರ್ಚಾಗುತ್ತದೆ. 15 ಸಾವಿರ ರೂ. ತೆಗೆದುಕೊಂಡು ಬನ್ನಿ ಎಂದು ಸೂಚಿಸಿದ್ದರು.
ಇದನ್ನೂ ಓದಿ – ಬ್ರ್ಯಾಂಡ್ ಶಿವಮೊಗ್ಗದ ‘ಹೃದಯ’ ಕಳ್ಳತನ | 100 ಅಡಿ ರಸ್ತೆ ಮಧ್ಯದಲ್ಲಿ ಗುಂಡಿ | ಕೆಂಪೇಗೌಡರ ಬೃಹತ್ ಭಾವಚಿತ್ರಕ್ಕೆ ನಮನ
ಲೋಕಾಯುಕ್ತಕ್ಕೆ ಮಾಹಿತಿ
ಕೇಸ್ ವರ್ಕರ್ ಚಂದ್ರಕಲಾ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಂಜುನಾಥ ಅವರು ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Raid) ಮಾಹಿತಿ ನೀಡಿದ್ದರು. ಇವತ್ತು ಪುರಸಭೆ ಕಚೇರಿಯಲ್ಲಿ ಮಂಜುನಾಥ ಅವರು ಕೇಸ್ ವರ್ಕರ್ ಚಂದ್ರಕಲಾ ಅವರಿಗೆ 15 ಸಾವಿರ ರೂ. ಹಣ ಕೊಟ್ಟಿದ್ದಾರೆ. ಅವರು ಲಂಚ ಸ್ವೀಕರಿಸುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಚಂದ್ರಕಲಾ ಅವರನ್ನು ಬಂಧಿಸಿದ್ದಾರೆ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ದಿನಾಂಕ ಫಿಕ್ಸ್, ಜಿಲ್ಲೆಯಾದ್ಯಂತ ಮೊಬೈಲ್ ನೆಟ್‌ವರ್ಕ್ ವಿಸ್ತರಣೆಗೆ ಗುಡುವು ನಿಗದಿ
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ರಾಧಾಕೃಷ್ಣ ಅವರು ಚಂದ್ರಕಲಾ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ್, ಸಿಬ್ಬಂದಿ ಪ್ರಸನ್ನ, ಮಹಾಂತೇಶ್, ಬಿ.ಟಿ.ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ಸುರೇಂದ್ರ, ರಘುನಾಯ್ಕ, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್ ಕುಮಾರ್, ಜೈಯಂತ್, ಗೋಪಿ ಅವರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200