ನಿನ್ನ ಬೈಕ್ ಕೊಡು ಎಂದು ವ್ಯಕ್ತಿಯನ್ನು ಅಡ್ಡಗಟ್ಟಿ ಹೊಡೆದ ಅಪರಿಚಿತರು, ಕಾರಣವೇನು? ಏನಿದು ಕೇಸ್‌?

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದ ಕೆ.ಆರ್. ಪುರಂ ರಸ್ತೆಯ ಭರ್ಮಪ್ಪ ನಗರ ಕ್ರಾಸ್ ಬಳಿ ಬೈಕ್ ನೀಡುವಂತೆ ಕೇಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ (man assaulted) ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಕಾಶಿಪುರದ ಸಂತೋಷ್ ಕುಮಾರ್ ಅವರು ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ, 25 ರಿಂದ 30 ವರ್ಷದ ಇಬ್ಬರು ಯುವಕರು ಅಡ್ಡಗಟ್ಟಿದ್ದಾರೆ. ನಿನ್ನ ಬೈಕ್ ಬೇಕು ಕೊಡು ಎಂದು ಕೇಳಿದಾಗ, ಸಂತೋಷ್ ಅವರು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಅವಾಚ್ಯ ಶಬ್ದಗಳಿಂದ ಬೈದು, ಮುಖ, ತುಟಿ ಮತ್ತು ಕುತ್ತಿಗೆಗೆ ಗುದ್ದಿದ್ದಾರೆ.

ಇದನ್ನೂ ಓದಿ : ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

ಸಂತೋಷ್‌ ಕುಮಾರ್‌ ಅವರ ಅಂಗಡಿಯ ಕೆಲಸಗಾರ ಬಿಡಿಸಲು ಬಂದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment